ಭಾರತೀಯ ಪ್ರಯಾಣಿಕರ ಮೇಲಿನ ಪ್ರಯಾಣ ನಿಷೇಧವನ್ನು ತೆಗೆದುಹಾಕಿದ ಒಮಾನ್

Update: 2021-08-23 12:23 GMT

ಹೊಸದಿಲ್ಲಿ: ‘ಟೈಮ್ಸ್ ಆಫ್ ಒಮಾನ್‌’ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಭಾರತೀಯ ಪ್ರಯಾಣಿಕರ ಮೇಲಿನ ಪ್ರಯಾಣದ ನಿಷೇಧವನ್ನು ಈಗ ಹಿಂಪಡೆಯಲಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ಸೋಮವಾರ ಘೋಷಿಸಿದೆ.

ಭಾರತದಿಂದ ಸಂಪೂರ್ಣವಾಗಿ ಲಸಿಕೆ ಪಡೆದ ಪ್ರಯಾಣಿಕರು ಈಗ ಒಮಾನ್‌ಗೆ ಪ್ರಯಾಣಿಸಬಹುದಾಗಿದೆ ಎಂದು ವರದಿ ತಿಳಿಸಿದೆ.

ಭಾರತವಲ್ಲದೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಇತರ 18 ದೇಶಗಳನ್ನು ಪ್ರಯಾಣ ನಿಷೇಧದ ಕೆಂಪು ಪಟ್ಟಿಯಿಂದ ತೆಗೆಯಲಾಗಿದೆ ಎಂದು ವರದಿ ತಿಳಿಸಿದೆ. ಕೋವಿಡ್-19 ಕಾರಣಕ್ಕೆ ಈ ಎಲ್ಲ ದೇಶಗಳನ್ನು ಕೆಂಪುಪಟ್ಟಿಗೆ ಸೇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News