ಅವಧಿ ಮೀರಿದ ಪಾಲಿಸಿಗಳಿಗೆ ಪುನರುಜ್ಜೀವ; ವಿಮೆದಾರರಿಗೆ ಅವಕಾಶ ಒದಗಿಸಿದ ಎಲ್ಲೈಸಿ

Update: 2021-08-26 05:44 GMT

ಮುಂಬೈ : ಅಧಿ ಮೀರಿದ ಪಾಲಿಸಿಗಳ ಪುನರುಜ್ಜೀವನದಂತಹ ಅಪೂರ್ವ ಅವಕಾಶವೊಂದನ್ನು ವಿಮೆದಾರರಿಗೆ ಒದಗಿಸಲು ಎಲ್ಲೈಸಿ ಮುಂದಾಗಿದೆ. ಅವಧಿ ಮೀರಿದ ವೈಯಕ್ತಿಕ ಪಾಲಿಸಿಗಳ ವಿಶೇಷ ಪುನರುಜ್ಜೀವನ ಅಭಿಯಾನವು ಆ.23ರಿಂದ ಆರಂಭಗೊಂಡಿದ್ದು, ಅಕ್ಟೋಬರ್ 22ರ ತನಕ ನಡೆಯಲಿದೆ.

ಸದ್ಯದ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟು ಒಟ್ಟು ಪ್ರೀಮಿಯಂ ಪಾವತಿಯನ್ನು ಆಧರಿಸಿ ಟರ್ಮ್ ಅಶ್ಯೂರೆನ್ಸ್ ಹಾಗೂ ಹೈರಿಸ್ಕ್ ಪ್ಲಾನ್‌ಗಳನ್ನು ಹೊರತುಪಡಿಸಿದ ಪಾಲಿಸಿಗಳಿಗೆ ವಿಳಂಬ ಶುಲ್ಕದಲ್ಲಿ ರಿಯಾಯಿತಿ ಕೊಡುಗೆ ನೀಡಲಾಗುವುದು. ವೈದ್ಯಕೀಯ ಅಗತ್ಯಗಳಿಗೆ ರಿಯಾಯಿತಿ ಇಲ್ಲ. ಅರ್ಹ ಆರೋಗ್ಯ ಹಾಗೂ ಮೈಕ್ರೊ ಇನ್‌ಶ್ಯುರೆನ್ಸ್ ಪ್ಲಾನ್‌ಗಳು ವಿಳಂಬ ಶುಲ್ಕದಲ್ಲಿ ರಿಯಾಯಿತಿ ಪಡೆ ಯಲು ಅರ್ಹವಾಗಿವೆ ಎಂದು ಪ್ರಕಟನೆ ತಿಳಿಸಿದೆ.

ವಿಶೇಷ ಪುನರುಜ್ಜೀವನ ಅಭಿಯಾನದಡಿ ನಿರ್ದಿಷ್ಟ ಅರ್ಹ ಯೋಜನೆಗಳ ಪಾಲಿಸಿಗಳನ್ನು ಕೆಲವು ನಿಯಮಗಳು ಹಾಗೂ ಷರತ್ತುಗಳಿಗೆ ಒಳಪಟ್ಟು ಮೊದಲು ಪಾವತಿಸಿದ ಪ್ರೀಮಿಯಂ ದಿನಾಂಕದಿಂದ 5 ವರ್ಷಗಳಲ್ಲಿ ಪುನಶ್ಚೇತನಗೊಳಿಸಬಹುದು.

1 ಲಕ್ಷ ರೂ. ತನಕದ ಒಟ್ಟು ಸ್ವೀಕರಿಸಬಹುದಾದ ಪ್ರೀಮಿಯಂಗೆ ಶೇ.20ರಷ್ಟು ವಿಳಂಬ ಶುಲ್ಕದ ರಿಯಾಯಿತಿ ಇದೆ. 1 ಲಕ್ಷದ 1 ರೂ.ನಿಂದ 3 ಲಕ್ಷ ರೂ. ತನಕ ಶೇ.25 ಹಾಗೂ 3 ಲಕ್ಷ 1 ರೂ. ಹಾಗೂ ಅದಕ್ಕಿಂತ ಹೆಚ್ಚಿನ ಪ್ರೀಮಿಯಂಗೆ ಶೇ.30 ರಷ್ಟು ರಿಯಾಯಿತಿ ಇದೆ.

ಅನಿವಾರ್ಯ ಪರಿಸ್ಥಿತಿಯಲ್ಲಿ ಸರಿಯಾದ ಸಮಯಕ್ಕೆ ಪ್ರೀಮಿಯಂ ಪಾವತಿಸದೆ ಅವಧಿಮೀರಿದ ಪಾಲಿಸಿಗಳ ವಿಮೆದಾರರಿಗೆ ಲಾಭ ತರಲು ಈ ಅಭಿಯಾನ ಆರಂಭಿಸಲಾಗಿದೆ. ಎಲ್ಲೈಸಿ ವಿಮೆದಾರರಿಗೆ ತಮ್ಮ ಪಾಲಿಸಿಗಳ ಪುನರುಜ್ಜೀವನಕ್ಕೆ ಈ ಅಭಿಯಾನವು ಉತ್ತಮ ಅವಕಾಶವಾಗಿದೆ ಎಂದು ಎಲ್ಲೈಸಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News