ನನ್ನ ಅಭಿಪ್ರಾಯ ಮತ್ತು ಹೆಸರನ್ನು ನಿಮ್ಮ ಕೆಟ್ಟ ಉದ್ದೇಶಗಳಿಗೆ ಬಳಸದಿರಿ: ನೀರಜ್‌ ಚೋಪ್ರಾ

Update: 2021-08-26 09:51 GMT

ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್‌ ನ ಜಾವೆಲಿನ್‌ ಎಸೆತ ಸ್ಫರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಭಾರತ ಕೀರ್ತಿ ಪತಾಕೆ ಹಾರಿಸಿದ್ದ ನೀರಜ್‌ ಚೋಪ್ರಾ ಇದೀಗ ವಿವಾದವೊಂದರ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕ್ರೀಡೆಯಲ್ಲಿ ಎಲ್ಲರೂ ಒಂದೇ , ನಿಮ್ಮ ಉದ್ದೇಶಗಳಿಗಾಗಿ ನನ್ನ ಹೆಸರನ್ನು ಬಳಸದಿರಿ ಎಂದು ಕಟು ಪ್ರತಿಕ್ರಿಯೆ ನೀಡಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಚೋಪ್ರಾ, "ನಾನು ಜಾವೆಲಿನ ಎಸೆಯುವ ವೇಳೆ ನನ್ನ ಜಾವೆಲಿನ್‌ ಗಾಗಿ ಹುಡುಕಾಟ ನಡೆಸಿದೆ. ಆದರೆ ಅದು ಅಲ್ಲಿರಲಿಲ್ಲ. ಅದು ಪಾಕಿಸ್ತಾನದ ಅರ್ಶದ್‌ ನದೀಮ್‌ ರ ಕೈಯಲ್ಲಿತ್ತು. ಬಳಿಕ ನಾನದನ್ನು ಕೇಳಿದಾಗ ವಾಪಸ್‌ ನೀಡಿದರು" ಎಂದು ಹೇಳಿದ್ದರು. ಆದರೆ ಈ ವಿಚಾರವನ್ನೇ ಸಾಮಾಜಿಕ ತಾಣದಲ್ಲಿ ಗುಲ್ಲೆಬ್ಬಿಸಲು ಬಳಸಿದ ಕೆಲ ಬಳಕೆದಾರರು ಅರ್ಶದ್‌ ನದೀಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೀಯಾಳಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ವೀಡಿಯೋ ಮೂಲಕ ಮಾಹಿತಿ ನೀಡಿದ ನೀರಜ್‌ "ನಾನು ಸಂದರ್ಶನದಲ್ಲಿ ಹೇಳಿದ್ದನ್ನು ಕೆಲವು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಜಾವೆಲಿನ್‌ ಇಡುವುದಕ್ಕೆಂದು ಒಂದು ಪ್ರತ್ಯೇಕ ಸ್ಥಳವಿದೆ. ಅಲ್ಲಿ ನಮ್ಮ ನಮ್ಮ ಜಾವೆಲಿನ್‌ ನಾವು ಇಡುತ್ತೇವೆ. ಯಾರಿಗೆ ಯಾವ ಜಾವೆಲಿನ್‌ ಬೇಕಾದರೂ ತೆಗೆದುಕೊಳ್ಳುವ ಅವಕಾಶವಿದೆ. ಹಾಗಾಗಿ ಅರ್ಶದ್‌ ಅದನ್ನು ಪಡೆದುಕೊಂಡಿದ್ದರು ಅಷ್ಟೇ. ಕ್ರೀಡೆಯಲ್ಲಿ ದ್ವೇಷವಿಲ್ಲ. ಇಲ್ಲಿ ನಾವೆಲ್ಲರೂ ಪ್ರೀತಿಯಿಂದ ಇದ್ದೇವೆ. ಇಂತಹಾ ಕೆಲ ಮಾತುಗಳಿಂದ ನನಗೆ ತೀವ್ರ ನೋವುಂಟಾಗಿದೆ. ನಿಮ್ಮ ಉದ್ದೇಶಗಳಿಗಾಗಿ, ಪಿತೂರಿಗಳಿಗಾಗಿ ನನ್ನ ಹೆಸರನ್ನು ಬಳಸದರಿ" ಎಂದು ಅವರು ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News