ಚೀನಾದ ಬಿಆರ್‌ಐ ಯೋಜನೆಯಿಂದ ದಕ್ಷಿಣ ಏಶ್ಯಾ ಪರಿಸರಕ್ಕೆ ಅಪಾಯ: ವರದಿ

Update: 2021-08-26 17:01 GMT

ಆಮ್ಸ್ಟರ್ಡ್ಯಾಂ, ಆ.26: ದಕ್ಷಿಣ ಏಶ್ಯಾ ವಲಯದ ದೇಶಗಳ ಸುಸ್ಥಿರ ಅಭಿವೃದ್ಧಿಗೆ ಪೂರಕ ಎಂದು ಚೀನಾ ಹೇಳುತ್ತಿರುವ ಬೆಲ್ಟ್ ಆ್ಯಂಡ್ ರೋಡ್ ಇನೀಷಿಯೇಟಿವ್(ಬಿಆರ್‌ಐ)ನಿಂದ ಆರ್ಥಿಕ, ಕಾನೂನಾತ್ಮತ , ಸಾರ್ವಭೌಮತಗೆ ಸಂಬಂಧಿಸಿದ ಸಮಸ್ಯೆಯ ಜತೆಗೆ ಪರಿಸರದ ಮೇಲೆ ಗಮನಾರ್ಹ ಅಪಾಯ ಉಂಟಾಗಲಿದೆ ಎಂದು ವರದಿಯೊಂದರಲ್ಲಿ ಎಚ್ಚರಿಸಲಾಗಿದೆ.

ಪರಿಸರ ಬದಲಾವಣೆಯ ವ್ಯತಿರಿಕ್ತ ಪರಿಣಾಮದಿಂದ ಅತ್ಯಧಿಕ ಸಮಸ್ಯೆಗೆ ಒಳಗಾಗುವ ಪ್ರದೇಶವಾಗಿರುವ ದಕ್ಷಿಣ ಏಶ್ಯಾ ವಲಯದ ಪರಿಸ್ಥಿತಿಯನ್ನು ಚೀನಾದ ಬಿಆರ್ಐ ಯೋಜನೆ ಮತ್ತಷ್ಟು ಹದಗೆಡಿಸಲಿದೆ ಎಂದು ‘ಯುರೋಪಿಯನ್ ಫೌಂಡೇಷನ್ ಫಾರ್ ಸೌತ್ಏಶಿಯನ್ ಸ್ಟಡೀಸ್(ಇಎಫ್ಎಸ್ಎಎಸ್) ವರದಿ ಹೇಳಿದೆ.

 ದಕ್ಷಿಣ ಏಶ್ಯಾ ಸೇರಿದಂತೆ ವಿಶ್ವದಾದ್ಯಂತ ಆರ್ಥಿಕ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ಚೀನಾ ತನ್ನ ಜಾಗತಿಕ ಆರ್ಥಿಕ ಮತ್ತು ರಾಜಕೀಯ ಪಾತ್ರವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ದಕ್ಷಿಣ ಏಶ್ಯಾ ಪ್ರದೇಶದಲ್ಲಿ ಕೈಗಾರೀಕರಣ ಪ್ರಕ್ರಿಯೆ ಹೆಚ್ಚುತ್ತಿರುವುದರಿಂದ ಪರಿಸರ ಮಾಲಿನ್ಯ ಸಮಸ್ಯೆ ಹೆಚ್ಚಿ ದೆ. ಇದೇ ಅಭಿಪ್ರಾಯವನ್ನು ಎನರ್ಜಿ ಆ್ಯಂಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ನ 2019ರ ವರದಿಯಲ್ಲೂ ಉಲ್ಲೇಖಿಸಲಾಗಿದೆ. ‌

ದಕ್ಷಿಣ ಏಶ್ಯಾ ವಲಯದ 91.2%ದಷ್ಟು ಜನಸಂಖ್ಯೆ ನಗರ ಪ್ರದೇಶದಲ್ಲಿರುವುದರಿಂದ ವಾಯು ಮಾಲಿನ್ಯ ತೀವ್ರವಾಗಿದ್ದು, ಈ ವಲಯ ವಿಶ್ವದ ಅತ್ಯಧಿಕ ಪರಿಸರ ಮಾಲಿನ್ಯ ವಲಯಗಳಲ್ಲಿ ಒಂದಾಗಿದೆ . ಚೀನಾದ ಬಿಆರ್‌ಐ ಯೋಜನೆಯಲ್ಲೂ ಕೈಗಾರೀಕರಣಕ್ಕೆ ಆದ್ಯತೆ ನೀಡಿರುವುದರಿಂದ ಪರಿಸರ ಮಾಲಿನ್ಯ ಹೆಚ್ಚುವುದರಲ್ಲಿ ಸಂಶಯವಿಲ್ಲ ಎಂದು ವರದಿ ಹೇಳಿದೆ.

ಕರ್ನಾಟಕದ ಬಿ.ವಿ.ನಾಗರತ್ನಾ ಸೇರಿದಂತೆ ಸುಪ್ರೀಂ ಕೋರ್ಟ್ಗೆ ಒಂಭತ್ತು ನೂತನ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರದ ಅಸ್ತು (ಅಪ್ಡೇಟ್)

ಹೊಸದಿಲ್ಲಿ,ಆ.26: ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾ.ಬಿ.ವಿ.ನಾಗರತ್ನಾ ಸೇರಿದಂತೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ಕೊಲಿಜಿಯಂ ಶಿಫಾರಸು ಮಾಡಿದ್ದ ಎಲ್ಲ ಒಂಭತ್ತು ಹೆಸರುಗಳಿಗೆ ಕೇಂದ್ರ ಸರಕಾರವು ಹಸಿರು ನಿಶಾನೆಯನ್ನು ತೋರಿಸಿದೆ.

ನೂತನ ನ್ಯಾಯಾಧೀಶರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಸಂಖ್ಯೆ 33ಕ್ಕೇರಲಿದ್ದು, ಒಂದು ಹುದ್ದೆ ಖಾಲಿ ಉಳಿಯಲಿದೆ.

ನೂತನ ನ್ಯಾಯಾಧೀಶರಲ್ಲಿ ಮೂವರು ಮಹಿಳೆಯರು ಸೇರಿದ್ದು,ನ್ಯಾ.ಬಿ.ವಿ.ನಾಗರತ್ನಾ ಅವರು 2027ರಲ್ಲಿ ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶರಾಗಬಹುದು. ತೆಲಂಗಾಣ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶೆ ಹಿಮಾ ಕೊಹ್ಲಿ ಮತ್ತು ಗುಜರಾತ ಉಚ್ಚ ನ್ಯಾಯಾಲಯದ ನ್ಯಾ.ಬೇಲಾ ತ್ರಿವೇದಿ ಅವರು ಇತರ ಇಬ್ಬರು ಮಹಿಳೆಯರಾಗಿದ್ದಾರೆ.
 
ಮುಖ್ಯ ನ್ಯಾಯಾಧೀಶರಾದ ಕರ್ನಾಟಕ ಉಚ್ಚ ನ್ಯಾಯಾಲಯದ ಅಭಯ್ ಓಕಾ,ಗುಜರಾತ ಉಚ್ಚ ನ್ಯಾಯಾಲಯದ ವಿಕ್ರಮನಾಥ ಮತ್ತು ಸಿಕ್ಕಿಂ ಉಚ್ಚ ನ್ಯಾಯಾಲಯದ ಜೆ.ಕೆ.ಮಹೇಶ್ವರಿ,ಕೇರಳ ಉಚ್ಚ ನ್ಯಾಯಾಲಯದ ಎರಡನೇ ಅತ್ಯಂತ ಹಿರಿಯ ನ್ಯಾಯಾಧೀಶ ಸಿ.ಟಿ.ರವಿಕುಮಾರ್ ಮತ್ತು ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎಂ.ಎಂ.ಸುಂದರೇಶ ಅವರ ಜೊತೆಗೆ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ನರಸಿಂಹ ಅವರ ಹೆಸರನ್ನೂ ಪದೋನ್ನತಿಗೆ ಶಿಫಾರಸು ಮಾಡಲಾಗಿದೆ. ರಾಮ ಜನ್ಮಭೂಮಿ ಪ್ರಕರಣ ಸೇರಿದಂತೆ ಹಲವಾರು ಮಹತ್ವದ ವಿಷಯಗಳಲ್ಲಿ ನರಸಿಂಹ ಸರಕಾರದ ಪರ ವಾದಿಸಿದ್ದರು.

ನೇಮಕಾತಿ ಪತ್ರಗಳ ವಿತರಣೆಗಾಗಿ ಈ ಎಲ್ಲ ಹೆಸರುಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News