ಅಸ್ಸಾಂ ಪ್ರವಾಹ: 11 ಜಿಲ್ಲೆಗಳ 1.33 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ

Update: 2021-08-28 11:01 GMT
 ಸಾಂದರ್ಭಿಕ ಚಿತ್ರ

ಗುವಾಹತಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಹದಗೆಡುತ್ತಿದ್ದು 11 ಜಿಲ್ಲೆಗಳಾದ್ಯಂತ 1.33 ಲಕ್ಷ ಜನರು ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ರಾಜ್ಯದ ವಿಪತ್ತು ನಿರ್ವಹಣಾ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.

ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದಿಂದ ಹಾನಿಗೊಳಗಾದ ಜಿಲ್ಲೆಗಳೆಂದರೆ ಬಿಸ್ವಾನಾಥ್, ಬೊಂಗೈಗಾಂವ್, ಚಿರಾಂಗ್, ಧೇಮಾಜಿ, ದಿಬ್ರುಗಡ್, ಜೋರ್ಹತ್, ಲಖಿಂಪುರ್, ಮಜುಲಿ, ಶಿವಸಾಗರ್, ಸೋನಿತ್‌ಪುರ್  ಹಾಗೂ  ತಿನ್ಸುಕಿಯಾ.

ಬ್ರಹ್ಮಪುತ್ರ ಹಾಗೂ  ಅದರ ಉಪನದಿಗಳ ಪ್ರವಾಹದಿಂದಾಗಿ ಇದುವರೆಗೆ 243 ಗ್ರಾಮಗಳು ಹಾನಿಗೊಳಗಾಗಿವೆ.

ಅದೃಷ್ಟವಶಾತ್ ಇದುವರೆಗೆ ಯಾವುದೇ ಪ್ರಾಣಹಾನಿ (ಮಾನವ ಅಥವಾ ಪ್ರಾಣಿ) ವರದಿಯಾಗಿಲ್ಲ ಎಂದು ಬುಲೆಟಿನ್ ತಿಳಿಸಿದೆ.

162 ಜನರನ್ನು ಹಾಗೂ 40 ಪ್ರಾಣಿಗಳನ್ನು ಇಲ್ಲಿಯವರೆಗೆ ದೋಣಿಗಳ ಸಹಾಯದಿಂದ ಸ್ಥಳಾಂತರಿಸಲಾಗಿದೆ.

ಬೊಂಗೈಗಾಂವ್ ಹಾಗೂ  ಚಿರಾಂಗ್‌ನ ಜಿಲ್ಲಾ ಆಡಳಿತಗಳು ಸ್ಥಾಪಿಸಿದ 66 ಪರಿಹಾರ ಶಿಬಿರಗಳಲ್ಲಿ 6,217 ಜನರು ಆಶ್ರಯ ಪಡೆದಿದ್ದಾರೆ. ಧೇಮಾಜಿ ಜಿಲ್ಲೆಯಲ್ಲಿ ಐದು ಮತ್ತು ತಿನ್ಸುಕಿಯಾದಲ್ಲಿ ಇನ್ನೂ ಮೂರು ಶಿಬಿರಗಳು ಸಿದ್ಧವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News