ಕಾಬೂಲ್ ಬಾಂಬ್ ದಾಳಿ ವಿರುದ್ಧ ಸೇನಾ ವರಿಷ್ಠರನ್ನು ಟೀಕಿಸಿದ್ದ ಅಮೆರಿಕ ನೌಕಾಪಡೆ ಯೋಧನ ವಜಾ

Update: 2021-08-28 16:01 GMT
photo : facebook

ಹೊಸದಿಲ್ಲಿ,ಆ.21: ಕಾಬೂಲ್ ವಿಮಾನನಿಲ್ದಾಣದಲ್ಲಿ ಬಾಂಬ್ ದಾಳಿಯ ಘಟನೆಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣಗಳಲ್ಲಿ ಅಮೆರಿಕ ಸೇನೆಯ ಹಿರಿಯ ನಾಯಕತ್ವದ ವಿರುದ್ಧ ಕಟುವಾದ ಟೀಕೆಯನ್ನು ಮಾಡಿದ್ದ ಅಮೆರಿಕದ ನೌಕಾಪಡೆ ಯೋಧನೊಬ್ಬನನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ.

ನೌಕಾಪಡೆಯ ಲೆಫ್ಟಿನೆಂಟ್ ಕರ್ನಲ್ ಸ್ಟುವರ್ಟ್ ಶೆಲ್ಲರ್ ಕರ್ತವ್ಯದಿಂದ ಬಿಡುಗಡೆಗೊಳಿಸಲ್ಪಟ್ಟ ಯೋಧ. ಅವರು ಶುಕ್ರವಾರ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಸಂದೇಶವೊಂದರಲ್ಲಿ, ಅಮೆರಿಕ ಸೇನೆಯ ತೆರವು ಕಾರ್ಯಾಚರಣೆ ಪ್ರಕ್ರಿಯೆಯನ್ನು ಕಟುವಾಗಿ ಟೀಕಿಸಿದ್ದು, ಜನರು ವ್ಯರ್ಥವಾಗಿ ಸಾವಿಗೀಡಾಗಿದ್ದಾರೆ ಎಂದಿದ್ದರು.

‘ಈಗ ನಿಮ್ಮಲ್ಲಿ ಯಾರಾದರೂ ನಿಮ್ಮ ಹುದ್ದೆಯನ್ನು ಎಸೆದು, ನಾವು ಪ್ರತಿಯೊಬ್ಬರನ್ನು ತೆರವುಗೊಳಿಸುವ ಮುನ್ನ ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನೆಯು ಬಗ್ರಾಮ್ ವಾಯುನೆಲೆಯನ್ನು ತೆರವುಗೊಳಿಸಿರುವುದು ಕೆಟ್ಟ ಚಿಂತನೆ ಅಲ್ಲವೇ ಎಂದು ಪ್ರಶ್ನಿಸುವಿರಾ’ ಎಂದು ಸಮವಸ್ತ್ರದಲ್ಲಿದ್ದ ಶೆಲ್ಲರ್ ಹೇಳುತ್ತಿರುವುದು ವಿಡಿಯೋದಲ್ಲಿ ತೋರಿಸಲಾಗಿದೆ.

 ಹಾಗೆ ಮಾಡಲು ನಿಮಗೆ ಸಾಧ್ಯವಾಗದೆ ಇದ್ದಲ್ಲಿ, ಯಾರಾದರೂ ಕೈಯೆತ್ತಿ ನಾವು ಸಂಪೂರ್ಣ ಗೊಂದಲ ಸೃಷ್ಟಿಸಿದ್ದೆವು ಎಂದು ಹೇಳುವಿರಾ ಎಂದು ಪ್ರಶ್ನಿಸಿದ್ದಾರೆ.

ಉನ್ನತ ಸೇನಾ ಅಧಿಕಾರಿಗಳು ಉತ್ತರದಾಯಿತ್ವವಿಲ್ಲದೆ ಅಧಿಕಾರದಲ್ಲಿಯೇ ಉಳಿದುಕೊಳ್ಳುತ್ತಿದ್ದಾರೆ. ನಾನು ಅಫ್ಘಾನಿಸ್ತಾನದಲ್ಲಿ 17 ವರ್ಷಗಳಿಂದ ಕಾದಾಡುತ್ತಿದ್ದೇನೆ. ಕಾಬೂಲ್ ವಿಮಾನ ನಿಲ್ದಾಣ ಬಾಂಬ್ ದಾಳಿಯ ಉತ್ತರದಾಯಿತ್ವಕ್ಕಾಗಿ ನಾನು ಹಿರಿಯ ನಾಯಕರಲ್ಲಿ ಆಗ್ರಹಿಸುತ್ತೇನೆ ಎಂದು ಶೆಲ್ಲರ್ ಹೇಳಿದ್ದಾರೆ.

ತನ್ನನ್ನು ಕರ್ತವ್ಯದಿಂದ ಮುಕ್ತಗೊಳಿಸಿರುವ ಬಗ್ಗೆ ಮೆರೈನ್ ಪಡೆಯ ಲೆಫ್ಟೆನೆಂಟ್ ಕರ್ನಲ್ ಆಗಿರುವ ಸ್ಟುವರ್ಟ್ ಶೆಲ್ಲರ್ ಶುಕ್ರವಾರ ಫೇಸ್ಬುಕ್ನಲ್ಲಿ ದೃಢಪಡಿಸಿದ್ದಾರೆ. ನಂಬಿಕೆ ಹಾಗೂ ವಿಶ್ವಾಸದ ಕೊರತೆಯಿಂದಾಗಿ ತನ್ನನ್ನು ಕರ್ತವ್ಯದಿಂದ ವಿಮೋಚನೆಗೊಳಿಸಲಾಗಿದೆ ಎಂದವರು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News