ಅತ್ಯಂತ ವೇಗವಾಗಿ 23,000 ಅಂತರ್ ರಾಷ್ಟ್ರೀಯ ರನ್ ದಾಖಲಿಸಿದ ವಿರಾಟ್ ಕೊಹ್ಲಿ

Update: 2021-09-02 14:42 GMT

ಲಂಡನ್, ಸೆ.2: ಭಾರತದ ನಾಯಕ ವಿರಾಟ್ ಕೊಹ್ಲಿ ಗುರುವಾರ ಕ್ರಿಕೆಟ್  ಇತಿಹಾಸದಲ್ಲಿ ಅತ್ಯಂತ ವೇಗವಾಗಿ 23,000 ಅಂತರ್ ರಾಷ್ಟ್ರೀಯ ರನ್ ಗಳನ್ನು ದಾಖಲಿಸಿದ ಬ್ಯಾಟ್ಸ್ ಮನ್ ಎಂಬ ಹಿರಿಮೆಗೆ ಪಾತ್ರರಾದರು.

ಗುರುವಾರ ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭವಾದ ನಾಲ್ಕನೇ ಟೆಸ್ಟ್ ಪಂದ್ಯದ ಆರಂಭಿಕ ದಿನದಂದು ಕೊಹ್ಲಿ ಈ ಸಾಧನೆಯನ್ನು ಮಾಡಿದರು. ಈ ಸಾಧನೆಯನ್ನು ಮಾಡಲು  ಭಾರತೀಯ ನಾಯಕ ಕೇವಲ 490 ಇನಿಂಗ್ಸ್ ಗಳನ್ನು  ತೆಗೆದುಕೊಂಡರು. ಸಚಿನ್ ತೆಂಡೂಲ್ಕರ್ ಇದೇ ಮೈಲಿಗಲ್ಲು ಸಾಧಿಸಲು 522 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 23,000 ಅಂತರ್ ರಾಷ್ಟ್ರೀಯ ರನ್ ಗಳಿಸಲು 544 ಇನಿಂಗ್ಸ್ ತೆಗೆದುಕೊಂಡಿದ್ದರು.

ಕಳೆದ  51 ಇನಿಂಗ್ಸ್ ಗಳಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಒಂದು ಶತಕವನ್ನು  ದಾಖಲಿಸದ ಕೊಹ್ಲಿ ಸದ್ಯ ರನ್ ಬರ ಎದುರಿಸುತ್ತಿದ್ದಾರೆ. ಅವರು ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 2019 ರಲ್ಲಿ ಕೊನೆಯ ಬಾರಿಗೆ ಶತಕ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News