ವ್ಹೀಲಿಂಗ್ : ವಾಹನಗಳನ್ನು ವಶಕ್ಕೆ ಪಡೆದ ಬೆಂಗಳೂರು ಸಂಚಾರ ಪೊಲೀಸರು

Update: 2021-09-06 14:25 GMT

ಬೆಂಗಳೂರು, ಸೆ.6: ಕಳೆದ ಎರಡು ವಾರಗಳಲ್ಲಿ ಸುಮಾರು 6 ವ್ಹೀಲಿಂಗ್ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ಪುರ ಸಂಚಾರ ಪೊಲೀಸರು, ಇಂದು ಮತ್ತೆ 3 ಪ್ರಕರಣಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ದಿನ ಸಂಚಾರ ಪೂರ್ವ ವಿಭಾಗದ ಡಿಸಿಪಿ ಶಾಂತರಾಜು ನಿರ್ದೇಶನದಂತೆ ಠಾಣಾಧಿಕಾರಿ ಎಂ.ಎ.ಮಹಮದ್ ಠಾಣಾ ವ್ಯಾಪ್ತಿಯಲ್ಲಿ, ಸಾದಾ ಉಡುಪಿನಲ್ಲಿ ವ್ಹೀಲಿಂಗ್ ಸ್ಕ್ವಾಡ್ ತಯಾರು ಮಾಡಿ ಕಾರ್ಯಾಚರಣೆ ಕೈಗೊಂಡಿದ್ದು, ವ್ಹೀಲಿಂಗ್ ನಿರತರಾಗಿದ್ದ 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಳೆ ಮದರಾಸು ರಸ್ತೆ, ಟಿಸಿ ಪಾಳ್ಯ ಮತ್ತು ಅಯ್ಯಪ್ಪನಗರ ಮುಖ್ಯ ರಸ್ತೆಗಳಲ್ಲಿ ಈ ವಾಹನಗಳನ್ನು ಮತ್ತು ವಾಹನ ಸವಾರರನ್ನು ವಶಕ್ಕೆ ಪಡೆಯಲಾಗಿದೆ. ಈ ವಾಹನಗಳ ಸೈಲೆನ್ಸರ್ ಗಳನ್ನು ಭಾರಿ ಶಬ್ದ ಬರುವ ರೀತಿಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿಕೊಂಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಸವಾರರಾದ ಸಾಗರ್, ಫೈರೋಝ್, ಸಂಜಯ ಗೌಡ ಎಂಬವರನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಕೆ.ಆರ್.ಪುರ ಸಂಚಾರ ಠಾಣಾ ಪೊಲೀಸ್ ಇನ್‍ಸ್ಪೆಕ್ಟರ್ ಮಹಮದ್, ಪಿಎಸ್‍ಐರವರಾದ ಸಯ್ಯದ್ ನಿಝಾಮುದ್ದೀನ್, ಅಶ್ವಥ್, ಪ್ರವೀಣ್ ಹಾಗೂ ಸಿಬ್ಬಂದಿ ನಂದೀಶ್, ಪ್ರಸನ್ನ, ಸುನಿಲ್ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News