ಮಯ್ಯದ್ದಿ

Update: 2021-09-13 16:46 GMT

ಮಂಗಳೂರು, ಸೆ.13: ಕುದ್ರೋಳಿ ನಿವಾಸಿ ಮಯ್ಯದ್ದಿ (88) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶನಿವಾರ ನಿಧನರಾದರು.
ಮೃತರು ಏಳು ಪುತ್ರಿಯರು, ಮೂವರು ಪುತ್ರರು ಸಹಿತ ಅಪಾರ ಬಂಧು-ಬಳಗ ಅಗಲಿದ್ದಾರೆ.

ಮಯ್ಯದ್ದಿಯಾಕ ಎಂದೇ ಖ್ಯಾತರಾಗಿದ್ದ ಇವರು ಅಡುಗೆ ತಯಾರಕರಾಗಿದ್ದರು. ಇವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಆರ್ಥಿಕ ನೆರವು ನೀಡುವ ಮೂಲಕ ಬಡ ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಗಿದ್ದರು. ಬಂದರು ಅನ್ಸಾರಿ ರಸ್ತೆಯಲ್ಲಿ ರಾತೀಬ್ ಕೊಟ್ಟಿಗೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಕುದ್ರೋಳಿ ನಡುಪಳ್ಳಿ ಜುಮಾ ಮಸೀದಿಯ ವಠಾರದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ