ವಾಹನದಲ್ಲಿಯೇ ಕುಳಿತು ಲಸಿಕೆ ಪಡೆಯಿರಿ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

Update: 2021-09-17 11:53 GMT

ಬೆಂಗಳೂರು, ಸೆ.17: ಕೋವಿಡ್ ಸಂಬಂಧ ನಾಗರಿಕರು ತಮ್ಮ ವಾಹನಗಳಲ್ಲಿಯೇ ಕುಳಿತುಕೊಂಡು ಲಸಿಕೆ ಪಡೆಯುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸಲಹೆ ನೀಡಿದರು.

ಶುಕ್ರವಾರನಗರದ ಬಿಬಿಎಂಪಿಂಯ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಬೃಹತ್ ಲಸಿಕಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಮ್ಮ ವಾಹನಗಳೊಂದಿಗೆ ಲಿಸಿಕಾ ಕೇಂದ್ರದ ಸ್ಥಳಕ್ಕೆ ಭೇಟಿ ಲಸಿಕೆ ಪಡೆಯಲು ಇಚ್ಛಿಸುವ ಫಲಾನುಭವಿಗಳಿಗೆ ಪ್ರತ್ಯೇಕ ಕೌಂಟರ್ ಸ್ಥಾಪಿಸಲಾಗಿದೆ ಎಂದರು.

ವಾಹನಗಳಲ್ಲಿ ಕುಳಿತುಕೊಂಡೇ ಕೋವಿಡ್ ಲಸಿಕೆ ಪಡೆಯುವಂತವರು ಅವರವರ ವಾಹನಗಳಲ್ಲಿಯೇ ನೋಂದಣಿ, ಪರಿಶೀಲನೆ ಮತ್ತು ಲಸಿಕೆಯನ್ನು ಪಡೆಯಬಹುದು. ಮತ್ತು ಲಸಿಕೆ ಪಡೆದ ನಂತರ ಪಾಕಿರ್ಂಗ್ ಸ್ಥಳದಲ್ಲಿ 30 ನಿಮಿಷಗಳ ಕಾಲ ಕಾಯಬಹುದು ಎಂದು ತಿಳಿಸಿದರು.

ಜನದಟ್ಟಣೆಯನ್ನು ತಡೆಗಟ್ಟಲು 4 ಲಸಿಕಾ ಬೂತ್‍ಗಳನ್ನು ತೆರೆಯಲಾಗಿರುತ್ತದೆ. ಪಾಲಿಕೆಯ ಇತರೆ ಲಸಿಕಾ ಕೇಂದ್ರಗಳಿಗೆ ಹೊರತುಪಡಿಸಿದರೆ, ಬೃಹತ್ ಲಸಿಕಾ ಕೇಂದ್ರದಲ್ಲಿ ಅರ್ಹತೆ ಹೊಂದಿರುವ ಎಲ್ಲಾ ಫಲಾನುಭವಿಗಳಿಗೂ ಲಸಿಕೆಯನ್ನು ನೀಡಲಾಗುವುದು. ಹಾಗೂ ಗರ್ಭಣಿಯರಿಗೆ ಹಾಗೂ ಬಾಣಂತಿಯರಿಗೂ ಸಹ ಕೋವಿಡ್ ಲಸಿಕೆಯನ್ನು ನೀಡಲಾಗುವುದು. 

ಅದೇರೀತಿ, ವಿಶೇಷವಾಗಿ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಮತ್ತು ವಿಶೇಷಚೇತನರಿಗೆ ಲಸಿಕೆಯನ್ನು ಪಡೆಯುವ ಸಲುವಾಗಿ ನೋಂದಣಿ ಮಾಡಿಸಲು ಪಿಂಕ್‍ಕೌಂಟರ್ ವ್ಯವಸ್ಥೆ ಮಾಡಲಾಗಿರುತ್ತದೆ. ಅಂಗವಿಕಲರಿಗಾಗಿ ವೀಲ್‍ಛೇರ್ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News