ಬೆಂಗಳೂರು: ಸೇನಾಧಿಕಾರಿ ವೇಷಧರಿಸಿ ಗುಪ್ತ ಮಾಹಿತಿ ರವಾನೆ; ಜಿತೇಂದರ್ ಸಿಂಗ್ ಬಂಧನ

Update: 2021-09-20 18:20 GMT
 ಬಂಧಿತ ಆರೋಪಿ ಜಿತೇಂದ್ರ ಸಿಂಗ್ 

ಬೆಂಗಳೂರು: ಸೇನಾಧಿಕಾರಿ ವೇಷ ಧರಿಸಿ ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನದ  ಐಎಸ್ ಐ ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ರಾಜಸ್ಥಾನ ಮೂಲದ ಭಾರತದ ಗಡಿ ಭಾಗದ ಬಾರ್ಮರ್ ನ ಜಿತೇಂದ್ರ ಸಿಂಗ್ ಎಂಬಾತನನ್ನು ಸಿಸಿಬಿ ಹಾಗೂ ಮಿಲಿಟರಿ ಗುಪ್ತಚರ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. 

ನಗರದಲ್ಲಿ ಬಟ್ಟೆ ವ್ಯಾಪಾರಿಯಾಗಿ ಕೆಲಸ ಮಾಡಿಕೊಂಡಿದ್ದ ರಾಜಸ್ತಾನದ ಬಾರ್ಮೆರ್ ಮೂಲದ ಜಿತೇಂದರ್ ಸಿಂಗ್ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.

ಸೋಮವಾರ ಇಲ್ಲಿನ ಕಾಟನ್‍ಪೇಟೆಯ ಜಾಲಿ ಮೊಹಲ್ಲಾದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಈ ಹಿಂದೆ ಮಿಲಿಟರಿ ಸೇನಾ ನೆಲೆ ಹಾಗೂ ವಾಹನಗಳಿಗೆ ಸಂಬಂಧಿಸಿದ ಗುಪ್ತ ಮಾಹಿತಿವಿರುವ ಫೋಟೋಗಳನ್ನು ನಿರಂತರವಾಗಿ ವಿದೇಶಿ ಏಜೆನ್ಸಿ ಅಧಿಕಾರಿಗೆ ಕಳುಹಿಸುತ್ತಿರುವ ಬಗ್ಗೆ ಆರೋಪ ಕೇಳಿಬಂದಿತ್ತು.

ಆನಂತರ, ಇಂಟಿಲಿಜೆನ್ಸ್ ಆಫ್ ಬ್ಯೂರೊ (ಐಬಿ), ಜಿತೇಂದರ್ ಮೊಬೈಲ್ ಮೂಲಕ ಪರಿಶೀಲನೆ ನಡೆಸಿದಾಗ ಬೆಂಗಳೂರಿನಲ್ಲಿ ಇರುವುದು ಗೊತ್ತಾಗಿತ್ತು. ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ ಐಬಿ, ಕಾಟನ್ ಪೇಟೆಯಲ್ಲಿ ವಾಸವಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News