ಬೆಂಗಳೂರು: 3 ಅಂತಸ್ತಿನ ಮತ್ತೊಂದು ಕಟ್ಟಡ ಭಾಗಶಃ ಕುಸಿತ
Update: 2021-09-28 11:15 IST
ಬೆಂಗಳೂರು, ಸೆ.28: ಮೂರು ಅಂತಸ್ತಿನ ಮತ್ತೊಂದು ಕಟ್ಟಡ ಭಾಗಶಃ ಕುಸಿದ ಘಟನೆ ಇಂದು ಬೆಳಗ್ಗೆ 9:30ರ ಸುಮಾರಿಗೆ ಡೇರಿ ಸರ್ಕಲ್ ಬಳಿಯಿರುವ ಕೆಎಂಎಫ್ ಕ್ವಾರ್ಟರ್ಸ್ ನಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಡೇರಿ ಸರ್ಕಲ್ ಬಳಿಯಿರುವ ಸುಮಾರು 30 ವರ್ಷ ಹಳೆಯ ಈ ಕಟ್ಟಡ ಇಂದು ಬೆಳಗ್ಗೆ ಏಕಾಏಕಿ ಕುಸಿದಿದೆ. ಈ ಕಟ್ಟಡದಲ್ಲಿ ಕೆಎಂಎಫ್ ನಲ್ಲಿ ಕೆಲಸ ಮಾಡುವ ಸುಮಾರು 18 ಕುಟುಂಬಗಳು ವಾಸವಿದ್ದು, ಕಟ್ಟಡ ಕುಸಿಯುತ್ತಿದ್ದಂತೆ ಅಲ್ಲಿದ್ದವರು ಓಡಿ ಹೊರಬಂದು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಲಕ್ಕಸಂದ್ರದಲ್ಲಿ ಸೋಮವಾರ ಮೂರು ಅಂತಸ್ತಿನ ಕಟ್ಟಡ ಕುಸಿತ ಸಂಭವಿಸಿದ ಸ್ಥಳದಿಂದ ಅರ್ಧ ಕಿ.ಮೀ. ದೂರದಲ್ಲಿ ಈ ಕಟ್ಟಡ ಕುಸಿದಿದೆ.