ಒಂದು ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ: ನಾಲ್ವರ ಬಂಧನ

Update: 2021-09-28 08:33 GMT

ಬೆಂಗಳೂರು, ಸೆ.28: ನಗರದ ವಿಲ್ಲಾವೊಂದರಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಸಿಸಿಬಿ ಮಾದಕದ್ರವ್ಯ ನಿಗ್ರಹ ದಳ ತಂಡವು ಸುಮಾರು ಒಂದು ಕೋಟಿ ರೂ.ಗೂ ಅಧಿಕ ಮೌಲ್ಯದ ಹೈಡ್ರೋ ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದೆ.

ಬಂಧಿತರಲ್ಲಿ ಇಬ್ಬರು ಇರಾನ್ ದೇಶದ ಡ್ರಗ್ಸ್ ಪೆಡ್ಲರ್ ಗಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ  ಮಧ್ಯಾಹ್ನ 1:30ರ ವೇಳೆ ಡಿ.ಜೆ. ಪೊಲೀಸ್ ರಾಣಾ ವ್ಯಾಪ್ತಿಯ ಕಾವೇರಿ ನಗರದ ಎ ಬ್ಲಾಕ್‌ನ 2ನೇ ಕ್ರಾಸ್ ರಸ್ತೆಯಲ್ಲಿ ನಾಲ್ವರು ಕಾರಿನಲ್ಲಿ ಬಂದು ಮಾದಕ ವಸ್ತುವಾದ ಎಲ್ ಎಸ್ ಡಿ ಪೇಪರ್ ಮತ್ತು ಹೃಡ್ರೋ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಗಾಂಜಾ ಹೊಂದಿದ ಆರೋಪದಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಪೈಕಿ ಇರಾನಿ ಪ್ರಜೆಗಳು ವೀಸಾ ಅವಧಿ ಮುಗಿದಿದ್ದರೂ ಸಹ ಭಾರತದಲ್ಲಿ ಅನಧಿಕೃತವಾಗಿ ನೆಲೆಸಿರುವುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಇವರುಗಳು ಡಾರ್ಕ್ ವೆಬ್ ನಲ್ಲಿ ಹೈಡ್ರೋ ಗಾಂಜಾ ಬೀಜಗಳನ್ನು ತರಿಸಿಕೊಂಡು ಬೆಂಗಳೂರಿನ ಬಿಡದಿಯ ಹತ್ತಿರದ ವಿಲ್ಲಾ ಒಂದನ್ನು ಬಾಡಿಗೆ ಪಡೆದು ಅಲ್ಲಿಯೇ ವೈಜ್ಞಾನಿಕವಾಗಿ ಅವುಗಳ ಗಿಡಗಳನ್ನು ಬೆಳೆಸಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ವೈಜ್ಞಾನಿಕವಾಗಿ ಹೈಡ್ರೊ ಗಾಂಜಾವನ್ನು ಬೆಳೆಸಲು ಮನೆಯನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.  ಗಾಂಜಾ ಬೆಳೆಯಲು ಉಪಯೋಗಿಸುತ್ತಿದ್ದ UV Lights, LED Lamps, Vaccum packing containers, Electrical weighing machine, 130  ಹೈಡ್ರೋ ಗಾಂಜಾ ಗಿಡಗಳು ಹಾಗೂ ಮಾರಾಟಕ್ಕೆ ಸಿದ್ದಪಡಿಸಿದ್ದ 1 ಕೋಟಿ ಬೆಲೆಯ 12. ಕೆ.ಜಿ 850 ಗ್ರಾಂ ತೂಕದ ಪೈಕ್ರೋ ಗಾಂಜಾ, ಎಲ್‌ಎಸ್‌ಡಿ ಸ್ಟ್ರಿಪ್ ಗಳು, ಗಾಂಜಾ ಮತ್ತು ಒಂದು ಸ್ಕೋಡಾ ಕಾರ್, ಮೊಬೈಲ್ ಫೋನ್‌ಗಳನ್ನು ಸಿಸಿಬಿ ತಂಡ ವಶಪಡಿಸಿಕೊಂಡಿದೆ.

ಬಂಧಿತರ ಇರಾನ್ ಪ್ರಜೆಯ ವಿರುದ್ಧ ಈ ಹಿಂದೆ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ)

ಹಾಗೂ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ಒಟ್ಟು ಮೂರು ಪ್ರಕರಣ ದಾಖಲಾಗಿರುವುದು

ವಿಚಾರಣೆಯ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News