ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿರುವ ಕೊಠಡಿಯ ಹೊರಗೆ ಡ್ರೋನ್ ಪತ್ತೆ

Update: 2021-10-05 07:36 GMT

ಲಕ್ನೊ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬಂಧಿತರಾಗಿರುವ ಸೀತಾಪುರದ ಸರಕಾರಿ ಅತಿಥಿಗೃಹದ ಕೊಠಡಿಯ ಹೊರಗೆ ಡ್ರೋನ್ ಪತ್ತೆಯಾಗಿದೆ ಎಂದು India Today ವರದಿ ಮಾಡಿದೆ.

ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಂಧಿತರಾಗಿರುವ ಸೀತಾಪುರದ ಪಿಎಸಿ ಅತಿಥಿ ಗೃಹದ ಹೊರಗೆ ಕ್ಯಾಮೆರಾ ಡ್ರೋನ್ ಸುತ್ತಾಡುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

30 ಗಂಟೆಗೂ ಅಧಿಕ ಸಮಯದಿಂದ ಬಂಧನದಲ್ಲಿರುವ ಪ್ರಿಯಾಂಕಾ ಗಾಂಧಿಯವರ ಕೊಠಡಿಯ ಮೇಲೆ ಹಾರಾಡುತ್ತಿರುವ ಡ್ರೋನ್ ಯಾರಿಗೆ ಸೇರಿದ್ದು, ಇದನ್ನು ಏಕೆ ಹೀಗೆ ಮಾಡಲಾಗುತ್ತಿದೆ? ಇದಕ್ಕೆ ಉತ್ತರ ಯಾರು ನೀಡುತ್ತಾರೆ? ಎಂದು ಭೂಪೇಶ್ ಬಘೇಲ್ ಹಿಂದಿಯಲ್ಲಿ ಟ್ವೀಟಿಸಿದ್ದಾರೆ.

ಡ್ರೋನ್ ಅನ್ನು ಉತ್ತರಪ್ರದೇಶ ಸರಕಾರ ನಿಯೋಜಿಸಿದೆ ಎಂದು ವೀಡಿಯೊ ಚಿತ್ರೀಕರಿಸಿದ ವ್ಯಕ್ತಿ ಹೇಳಿಕೊಂಡಿದ್ದಾರೆ.

‘ಇಂಡಿಯಾ ಟುಡೇ’ ಸ್ವತಂತ್ರವಾಗಿ ವೀಡಿಯೋ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News