ಮ್ಯಾನ್ಮಾರ್ ನ ಜನವಸತಿ ಪ್ರದೇಶಗಳಲ್ಲಿ ಸೇನೆ, ಶಸ್ತ್ರಾಸ್ತ್ರ ನಿಯೋಜನೆ : ವಿಶ್ವಸಂಸ್ಥೆ ಆತಂಕ

Update: 2021-10-08 17:32 GMT

ಜಿನೇವಾ,ಅ.9:ಮ್ಯಾನ್ಮಾರ್ ನ ಮಿಲಿಟರಿ ಜುಂಟಾ (ಆಡಳಿತ)ವು ದೇಶದ ನಗರಗಳಲ್ಲಿನ ಕೆಲವು ನಿರ್ದಿಷ್ಟ ಜನವಸತಿ ಪ್ರದೇಶಗಳಲ್ಲಿ ಭಾರೀ ಶಸ್ತ್ರಾಸ್ತ್ರಗಳು ಹಾಗೂ ಸೈನಿಕರನ್ನು ನಿಯೋಜಿಸಿರುವ ಬಗ್ಗೆ ವಿಶ್ವಸಂಸ್ಥೆ ಶುಕ್ರವಾರ ಧ್ವನಿಯೆತ್ತಿದ್ದು, ದೇಶದ ನಾಗರಿಕರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದೆ.


ಮ್ಯಾನ್ಮಾರ್ ನ  ನಗರ ಪ್ರದೇಶಗಳಲ್ಲಿ ಉನ್ನತ ದರ್ಜೆ ಕಮಾಂಡರ್ಗಳ ನಿಯೋಜನೆಯು ಪರಿಸ್ಥಿತಿಯು ಕಳವಳಕಾರಿಯಾಗಿ ಬಿಗಡಾಯಿಸುತ್ತಿರುವುದನ್ನು ಪ್ರತಿನಿಧಿಸುತ್ತಿದೆಯೆಂದು ವಿಶ್ವಸಂಸ್ಥೆಯ ಉನ್ನತ ಆಯುಕ್ತರ ಕಾರ್ಯಾಲಯವು ತಿಳಿಸಿದೆ.


‘‘ಕಳೆದ ಕೆಲವು ದಿನಗಳಿಂದ ಮ್ಯಾನ್ಮಾರ್ ಸೇನೆಯು ಗಣನೀಯ ಪ್ರಮಾಣದಲ್ಲಿ ಸೈನಿಕರು ಹಾಗೂ ಶಸ್ತ್ರಾಸ್ತ್ರಗಳನ್ನು ಜನವಸತಿ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತಿರುವ ಬಗ್ಗೆ ಕಳವಳಕಾರಿ ವರದಿಗಳು ಬಂದಿವೆ ’’ ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಾರ್ಯಾಲಯದ ವಕ್ತಾರೆ ರವೀನಾ ಶಾಮ್ದಾಸಾನಿ ಜಿನೇವಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.


   ಚಿನ್ ರಾಜ್ಯದ ಕಾನ್ಪೆಟ್ಲೆಟ್ ಹಾಗೂ ಸೆಂಟ್ರಲ್ ಸಾಗಾಯಿಂಗ್ ಪ್ರಾಂತದ ಮೊನಿವಾ ಹಾಗೂ ಮಾಗ್ವೇ ಪ್ರಾಂತದ ಗಂಗ್ವಾ ಪಟ್ಟಣ ವಸತಿ ಪ್ರದೇಶಗಳಲ್ಲಿ ಸೇನೆಗಳನ್ನು ನಿಯೋಜಿಸಲಾಗಿದೆಯೆಂದು ಆಕೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News