ಜೋಸೆಫ್ ಡಿ’ಮೆಲ್ಲೋ

Update: 2021-10-10 08:09 GMT

ಪುತ್ತೂರು: ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಸುದೀರ್ಘ 37 ವರ್ಷಗಳ ಕಾಲ ಶಿಕ್ಷಕರಾಗಿದ್ದು,  ನಿವೃತ್ತಿ ಹೊಂದಿದ ನಗರದ ಪರ್ಲಡ್ಕ ಗೋಳಿಕಟ್ಟೆ ಎಂಬಲ್ಲಿನ ನಿವಾಸಿ ಜೋಸೆಫ್ ಡಿ’ಮೆಲ್ಲೋ(70) ಎಂಬವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನ ಹೊಂದಿದರು.

ಜೋಸೆಫ್ ಡಿಮೆಲ್ಲೋ ಅವರು ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಪಾಲನಾ ಸಮಿತಿಯ ಕಾರ್ಯದರ್ಶಿಯಾಗಿ, ಸದಸ್ಯರಾಗಿ, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸೇವೆ, ಡೊನ್ ಬೊಸ್ಕೊ ಕ್ಲಬ್‌ನ ಮಾಸ ಪತ್ರಿಕೆ `ಪುತ್ತೂರ್‍ಚೆ ನೆಕೆತ್ರ್’ ಹಾಗೂ ಮಾಯಿದೆ ದೇವುಸ್ ಚರ್ಚ್‌ನ ಪತ್ರಿಕೆ `ಆವಯ್’ನಲ್ಲಿ ಪುಟ ವಿನ್ಯಾಸಕಾರರಾಗಿ ಸೇವೆಯನ್ನು ನೀಡಿರುತ್ತಾರೆ. ಹಲವು ಕೊಂಕಣಿ ನಾಟಕಗಳಲ್ಲಿ ಅಭಿನಯ ಹಾಗೂ ಗೀತೆ ರಚನೆ, ವೈಸಿಎಸ್ ಹಾಗೂ ವೈಸಿಎಂ ಸಚೇತಕರಾಗಿ ಜೋಸೆಫ್ ಡಿ’ಮೆಲ್ಲೋರವರು ಸೇವೆಯನ್ನು ಸಲ್ಲಿಸಿರುತ್ತಾರೆ.

ಮೃತ ಜೋಸೆಫ್ ಡಿ’ಮೆಲ್ಲೋ ಅವರು ಪತ್ನಿ  ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ