ತೈವಾನ್ ಚೀನಾದ ಒತ್ತಡಕ್ಕೆ ಮಣಿಯದು: ಅಧ್ಯಕ್ಷೆ ತ್ಸಾಯಿಂಗ್ ವೆನ್ ಘೋಷಣೆ

Update: 2021-10-10 18:19 GMT
photo;twitter.com/@AJEnglish

    ತೈಪೆ,ಅ.10: ತೈವಾನ್ ಬೀಜಿಂಗ್ನ ಒತ್ತಡಕ್ಕೆ ಮಣಿಯಲಾರದು ಹಾಗೂ ಅದು ತನ್ನ ಪ್ರಜಾತಾಂತ್ರಿಕ ಜೀವನಶೈಲಿಯನ್ನು ರಕ್ಷಿಸಿಕೊಳ್ಳಲಿದೆ ಎಂದು ತೈವಾನ್ ಅಧ್ಯಕ್ಷೆ ತ್ಸಾಯಿಂಗ್ ವೆನ್ ರವಿವಾರ ಘೋಷಿ ಸಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಚೀನಾದ ಯುದ್ಧವಿಮಾನಗಳು ಹಲವಾರು ತೈವಾನ್ನ ವಾಯುಸೀಮೆಯೊಳಗೆ ನುಸುಳಿದ ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
    ‘‘ನಾವು ಹೆಚ್ಚಿನ ಸಾಧನೆಯನ್ನು ಮಾಡಿದಷ್ಟು ಚೀನಾದಿಂದ ಅಪಾರ ಒತ್ತಡವನ್ನು ಎದುರಿಸುತ್ತೇವೆ ಎಂದು ತ್ಸಾಯಿ ಅವರು ತೈವಾನ್ನ ರಾಷ್ಟ್ರೀಯ ದಿನಾಚರಣೆಯ ದಿನದ ಅಂಗವಾಗಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ. ‘‘ ಚೀನಾ ನಮಗೆ ತೋರಿಸಿದ ದಾರಿಯನ್ನು ಹಿಡಿಯುವಂತೆ ಯಾರೂ ಕೂಡಾ ನಮ್ಮನ್ನು ಬಲವಂತಪಡಿಸುವಂತಿಲ್ಲ ’’ತ್ಸಾಯಿ ತಿಳಿಸಿದ್ದಾರೆ.ತೈವಾನ್ ದೇಶವು ಪ್ರಜಾಪ್ರಭುತ್ವದ ಮುಂಚೂಣಿಯ ರಕ್ಷಕನಾಗಿ ನಿಲ್ಲಲಿದೆ ಎಂದು ಅವರು ಘೋಷಿಸಿದರು.
 ನಾವು (ಬೀಜಿಂಗ್ ಜೊತೆ )ಸಂಬಂಧಗಳನ್ನು ಸುಧಾರಿಸುವ ಆಶಾವಾದವನ್ನು ಹೊಂದಿದ್ದೇವೆ.ಆದರೆ ಆದರೆ ತೈವಾನಿ ಜನರು ಒತ್ತಡಕ್ಕೆ ಮಣಿಯುವರು ಎಂಬ ಬಗ್ಗೆ ಖಂಡಿತವಾಗಿಯೂ ಯಾವುದೇ ಭ್ರಮೆಗಳು ಇರಬಾರದು ಎಂದರು ಹೇಳಿದರು. 1949ರಲ್ಲಿ ಚೀನಾದ ಅಂತರ್ಯದ್ಧವು ಕೊನೆಗೊಂಡ ಬಳಿಕ ಚೀನಾ ಹಾಗೂ ತೈವಾನ್ ಪ್ರತ್ಯೇಕ ಆಡಳಿತಕ್ಕೊಳಪಟ್ಟಿದ್ದವು.
   ಐದು ವರ್ಷಗಳ ಹಿಂದೆ ತೈವಾನ್ ಅಧ್ಯಕ್ಶೆಯಾಗಿ ತ್ಸಾಯಿ ಆಯ್ಕೆಯಾದ ಬಳಿಕ ಚೀನಾ ಅಧ್ಯಕ್ಷ ಕ್ಸಿಜಿನ್ಪಿಂಗ್ ಅವರು ಆ ದೇಶದೊಂದಿಗೆ ಅಧಿಕೃತ ಸಂವಹನವನ್ನು ಕಡಿದುಕೊಂಡಿದ್ದರು ಮತ್ತು ಆರ್ಥಿಕ, ರಾಜತಾಂತ್ರಿಕ ಹಾಗೂ ಸೇನಾ ಒತ್ತಡವನ್ನು ಅಧಿಕಗೊಳಿಸಿತ್ತು.
 ಕಳೆದ ವಾರ ಚೀನಿ ಫೈಟರ್ ಜೆಟ್ಗಳು ಹಾಗೂ ಅಣ್ವಸ್ತ್ರಶಕ್ತ ಬಾಂಬರ್ಗಳು ತೈವಾನ್ನ ವಾಯುರಕ್ಷಣಾ ಗುರುತು ವಲಯವನ್ನು ಉಲ್ಲಂಘಿಸಿ ಹಾರಾಟ ನಡೆಸಿದ ಬಳಿಕ ಉಭಯದೇಶಗಳ ನಡುವೆ ಉದ್ವಿಗ್ನತೆ ಉಲ್ಬಣಿಸಿತ್ತು.
 ರವಿವಾರದಂದು ಮೂರು ಚೀನಿ ವಿಮಾನಗಳು, ಎರಡು ಫೈಟರ್ ಜೆಟ್ಗಳು ತೈವಾನ್ನ ವಾಯುಸೀಮೆಯೊಳಗೆ ಪ್ರವೇಶಿಸಿದ್ದವು ಎಂದು ತೈವಾನ್ನ ರಕ್ಷಣಾ ಸಚಿವಾಲಯ ಆಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News