ಚೀನಾದ 106 ಕೋಟಿ ಮಂದಿಗೆ ಲಸಿಕೆ ನೀಡಿಕೆ ಪೂರ್ಣ

Update: 2021-10-24 16:44 GMT

ಬೀಜಿಂಗ್,ಅ.24: ಅಕ್ಟೋಬರ್ 23ರವರೆಗೆ ಚೀನಾ ದೇಶವು ತನ್ನ ಒಟ್ಟು ಜನಸಂಖ್ಯೆಯ ಶೇ.75.6 ಮಂದಿಗೆ ಕೋವಿಡ್-19 ಲಸಿಕೆಯ ಎರಡೂ ಡೋಸ್ಗಳ ನೀಡಿಕೆಯನ್ನು ಪೂರ್ಣಗೊಳಿಸಿದೆಯೆಂದು ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್ ರವಿವಾರ ತಿಳಿಸಿದ್ದಾರೆ.

ದೇಶದ 142 ಕೋಟಿ ಜನಸಂಖ್ಯೆಯ ಪೈಕಿ ಸುಮಾರು 106 ಕೋಟಿ ಮಂದಿಗೆ ಅಗತ್ಯವಿರುವಷ್ಟು ಡೋಸೆಜ್‌ಗಳನ್ನು ನೀಡಲಾಗಿದೆ ಎಂದು ಮಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ಕನಿಷ್ಠ ಆರು ತಿಂಗಳ ಹಿಂದೆ ಲಸಿಕೆಯ ಡೋಸ್ ಪಡೆದುಕೊಂಡವರಿಗೆ ಚೀನಾವು ಆರೋಗ್ಯ ಕ್ಷೇತ್ರದ ಸಿಬ್ಬಂದಿ, ವೃದ್ಧರು ಹಾಗೂ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿದವರು ಸೇರಿದಂತೆ ಆದ್ಯತಾ ಗುಂಪುಗಳಿಗೆ ಬೂಸ್ಟರ್ ಶಾಟ್ ನೀಡಿದೆ ಎಂದು ಅಧಿಕೃತ ದತ್ತಾಂಶಗಳು ತಿಳಿಸಿವೆ.

ಆದಾಗ್ಯೂ ಚೀನಾದಲ್ಲಿ ಕೊರೋನ ಸೋಂಕಿನ ಪ್ರಕರಣಗಳು ಮತ್ತೆ ವರದಿಯಾಗುತ್ತಿರುವ ಬಗ್ಗೆ ಮಿ ಅವರು ಎಚ್ಚರಿಕೆ ನೀಡಿದ್ದಾರೆ. ಕಳೆದ ಒಂದು ವಾರದಲ್ಲಿ ದೇಶದ 11 ಪ್ರಾಂತೀಯ ಪ್ರದೇಶಗಳಲ್ಲಿ 100ಕ್ಕೂ ಅಧಿಕ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News