ವಿಶ್ವಕಪ್: ಬಾಂಗ್ಲಾದೇಶವನ್ನು ಮಣಿಸಿದ ಇಂಗ್ಲೆಂಡ್

Update: 2021-10-27 13:43 GMT
photo: ICC

ಅಬುಧಾಬಿ: ಎಡಗೈ ವೇಗದ ಬೌಲರ್ ಟೈಮಲ್ ಮಿಲ್ಸ್(3-27) ನೇತೃತ್ವದ ಅಮೋಘ ಬೌಲಿಂಗ್ ಹಾಗೂ ಜೇಸನ್ ರಾಯ್ ಅವರ ಅರ್ಧಶತಕ(61, 38 ಎಸೆತ)ಕೊಡುಗೆಯ ನೆರವಿನಿಂದ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧ ಬುಧವಾರ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ನ ಗ್ರೂಪ್-1ರ 20ನೇ ಪಂದ್ಯದಲ್ಲಿ 8 ವಿಕೆಟ್ ಗಳಿಂದ ಗೆಲುವು ದಾಖಲಿಸಿದೆ.

ಟಾಸ್ ಜಯಿಸಿದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಮಿಲ್ಸ್, ಲಿವಿಂಗ್ ಸ್ಟೋನ್(2-15) ಹಾಗೂ ಮೊಯಿನ್ ಅಲಿ(2-18) ದಾಳಿಗೆ ತತ್ತರಿಸಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತು. ಬಾಂಗ್ಲಾ ಪರವಾಗಿ ಮುಶ್ಫಿಕುರ್ರಹೀಂ(29, 30 ಎಸೆತ)ಗರಿಷ್ಟ ಸ್ಕೋರ್ ಗಳಿಸಿದರು. ಮಹ್ಮುದುಲ್ಲಾ(19), ನಸುಮ್ ಅಹ್ಮದ್(ಔಟಾಗದೆ 19)ಎರಡಂಕೆಯ ಸ್ಕೋರ್ ಗಳಿಸಿದರು.

ಗೆಲ್ಲಲು ಸುಲಭ ಸವಾಲು ಪಡೆದ ಇಂಗ್ಲೆಂಡ್ 14.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತು. ಆರಂಭಿಕ ಬ್ಯಾಟ್ಸ್ ಮನ್ ಜೇಸನ್ ರಾಯ್(61, 38 ಎಸೆತ, 5 ಬೌಂಡರಿ, 3 ಸಿಕ್ಸರ್) ಅಗ್ರ ಕ್ರಮಾಂಕದಲ್ಲಿ ಉತ್ತಮ ಆರಂಭ ನೀಡಿದರು. ಡೇವಿಡ್ ಮಲಾನ್ ಔಟಾಗದೆ 28 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News