×
Ad

ಪುನೀತ್ ರಾಜ್ ಕುಮಾರ್ ಕುರಿತು ಅವಹೇಳನಕಾರಿ ಪೋಸ್ಟ್: ಆರೋಪಿಯ ಬಂಧನ

Update: 2021-11-02 11:27 IST

ಬೆಂಗಳೂರು, ನ.2: ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ರಾಜ್ಯ ಸರ್ಕಾರ ಎರಡು ದಿನ ಮದ್ಯ ನಿಷೇಧ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದ ಬಳಿಕ ಅಭಿಮಾನಿಗಳು ಅತಿರೇಕದ ವರ್ತನೆ ತೋರಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಎರಡು ದಿನ ಮದ್ಯ ನಿಷೇಧ ಮಾಡಿತ್ತು. 

ಇದರ ಬಗ್ಗೆ ರಿತ್ವಿಕ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಬರೆದಿದ್ದ.

ಈ ಕುರಿತು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಗೆ ಟ್ವಿಟರ್ ನಲ್ಲಿ ದೂರು ನೀಡಿದರು. ಬಳಿಕ ಕೂಡಲೇ ಆತನ ಬಂಧಿಸಿದ್ದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News