ಚಾರಿತ್ರಿಕ ನಿರ್ಣಯಕ್ಕೆ ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖಂಡರ ಅನುಮೋದನೆ

Update: 2021-11-11 18:30 GMT

ಬೀಜಿಂಗ್, ನ.11: ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರ ಆಡಳಿತಾವಧಿಗೆ ಸಂಬಂಧಿಸಿದ ಕೆಲವು ಪ್ರಮುಖ ನಿರ್ಧಾರ ಸಹಿತ ಚಾರಿತ್ರಿಕ ನಿರ್ಣಯಕ್ಕೆ ಚೀನಾ ಕಮ್ಯುನಿಸ್ಟ್ ಪಕ್ಷದ ಉನ್ನತ ಮುಖಂಡರು ಅನುಮೋದನೆ ನೀಡಿದ್ದಾರೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. ‌

ಅಧ್ಯಕ್ಷ ಕ್ಸಿ ಜಿಂಪಿಂಗ್ ನೇತೃತ್ವದಲ್ಲಿ ನಡೆದ ಚೀನಾ ಕಮ್ಯುನಿಸ್ಟ್ ಪಕ್ಷದ ಉನ್ನತ ಸಮಿತಿಯ ವಾರ್ಷಿಕ ಅಧಿವೇಶನದಲ್ಲಿ ಸುಮಾರು 400 ಮುಖಂಡರು ಪಾಲ್ಗೊಂಡಿದ್ದಾರೆ. 100 ವರ್ಷದ ಇತಿಹಾಸವಿರುವ ಪಕ್ಷವು ಮುಂದಿನ ಸಾವಿರ ವರ್ಷವೂ ಚಿರಸ್ಥಾಯಿಯಾಗಿ ಉಳಿಯುವ ಅತ್ಯಂತ ಅದ್ಭುತ ಸಾಧನೆ ದಾಖಲಿಸಿದೆ. 

ದೇಶದ ಎಲ್ಲಾ ಜನರೂ ಕಾಮ್ರೇಡ್ ಕ್ಸಿ ಜಿಂಪಿಂಗ್ ಅವರ ಜತೆ ಕೈಜೋಡಿಸಿ ಅವರೊಂದಿಗೆ ಸಹಕರಿಸಿ , ಸಾಮಾಜಿಕವಾದ ಮತ್ತು ಚೀನಾದ ವೈಶಿಷ್ಟ್ಯ ಮೇಳೈಸಿರುವ ಅವರ ನೂತನ ಕಲ್ಪನೆಯ ಯುಗದ ವ್ಯವಸ್ಥೆಯ ಜಾರಿಗೆ ನೆರವಾಗಬೇಕು ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಈ ವಾರ್ಷಿಕ ಅಧಿವೇಶನವು ಮುಂದಿನ ದಿನದಲ್ಲಿ ನಡೆಯಲಿರುವ ಪಕ್ಷದ ಮಹಾಧಿವೇಶನದ ಪೂರ್ವಭಾವಿ ಸಭೆಯಾಗಿದ್ದು ಮಹಾಧಿವೇಶನದಲ್ಲಿ ಅಧ್ಯಕ್ಷ ಕ್ಸಿ ಜಿಂಪಿಂಗ್ 3ನೇ ಅವಧಿಗೆ ಕಾರ್ಯನಿರ್ವಹಿಸುವ ಪ್ರಸ್ತಾವನೆಗೆ ಅನುಮೋದನೆ ದೊರಕುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News