ಬೆಂಗಳೂರು: ಟ್ರ್ಯಾಕ್ಟರ್ ಹರಿದು ಸ್ಥಳದಲ್ಲೇ ಬಾಲಕ ಮೃತ್ಯು
Update: 2021-11-20 15:57 IST
ಬೆಂಗಳೂರು, ನ.19- ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ದ್ವಿಚಕ್ರವಾಹನ ಒಂದು ಸ್ಕಿಡ್ ಆಗಿದ್ದು, ಹಿಂಬದಿ ಕುಳಿತಿದ್ದ ಬಾಲಕನ ಮೇಲೆ ಹಿಂದಿನಿಂದ ಬಂದ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮೃತ ಬಾಲಕನನ್ನು ಇಸ್ಲಾಂಪುರ ಗ್ರಾಮದ ಮುಹ್ಮದ್ ಹ್ಯಾರಿಸ್ ಎಂದು ಗುರುತಿಸಲಾಗಿದೆ.
ದ್ವಿಚಕ್ರವಾಹನ ಚಾಲನೆ ಮಾಡ್ತಿದ್ದ ಮುಹ್ಮದ್ ಅಲ್ತಾಫ್ ಪ್ರಾಣಾಪಾಯದಿಂದ ಪಾರಾಗಿದ್ದು, ಮುಹ್ಮದ್ ಹ್ಯಾರಿಸ್ ಹಿಂಬದಿಯಲ್ಲಿ ಕುಳಿತಿದ್ದ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು