ಕೆ.ಜಿ.ಗೆ ನೂರು ರೂ. ದಾಟಿದ ಟೊಮೆಟೊ ದರ
Update: 2021-11-23 07:49 IST
ಬೆಂಗಳೂರು: ನಿರಂತರವಾಗಿ ಏರಿಕೆ ಕಂಡಿರುವ ಟೊಮೆಟೊ ದರ ಸೋಮವಾರ ನೂರು ರೂ. ದಾಟಿದೆ. ಸಗಟು, ಚಿಲ್ಲರೆ ಹಾಗೂ ಹಾಪ್‌ಕಾಮ್ಸ್‌ನಲ್ಲೂ ಟೊಮೆಟೊ ಕೆ.ಜಿಗೆ 100 ರೂ. ಹಾಗೂ ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟವಾಗಿದೆ.
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ತರಕಾರಿಗಳ ದರ 15 ದಿನಗಳಿಂದ ಏರಿಕೆ ಕಂಡಿವೆ. ಎರಡು ದಿನಗಳ ಹಿಂದೆ ಟೊಮೆಟೊ ದರ 70 ರೂ.ರಷ್ಟಿತ್ತು. ಸೋಮವಾರದ ವೇಳೆಗೆ ದರ ದಿಢೀರ್ ಏರಿದ್ದು, ಚಿಲ್ಲರೆ ಮಳಿಗೆಗಳಲ್ಲಿ ಕೆ.ಜಿ.ಗೆ 150 ರೂ. ಬೆಲೆಗೆ ಮಾರಾಟವಾಗಿದೆ. ಹಾಪ್‌ಕಾಮ್ಸ್‌ನಲ್ಲೂ ಟೊಮಟೊ ದರ 100ಕ್ಕೆ ಏರಿದೆ ಎಂದು ಗ್ರಾಹಕರು ತಿಳಿಸಿದ್ದಾರೆ.