ಮರಣೋತ್ತರ ಶೌರ್ಯಚಕ್ರ ಪ್ರಶಸ್ತಿ ಪಡೆಯುವಾಗ ಕಣ್ಣೀರಾದ ಜಮ್ಮು- ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿ ತಾಯಿ ಸಾರಾ ಬೇಗಂ

Update: 2021-11-24 07:12 GMT
Photo: Twitter/@rashtrapatibhvn

ಹೊಸದಿಲ್ಲಿ: ದೇಶದ ಮೂರನೇ ಅತ್ಯಂತ ಉನ್ನತ ಶೌರ್ಯ ಪ್ರಶಸ್ತಿಯಾದ  ಶೌರ್ಯ ಚಕ್ರವನ್ನು ಮರಣೋತ್ತರವಾಗಿ ತನ್ನ ಪುತ್ರನಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರದಾನ ಮಾಡಿದಾಗ ಪ್ರಶಸ್ತಿ ಸ್ವೀಕರಿಸಿದ ದಿವಂಗತ ಪೊಲೀಸ್ ಅಧಿಕಾರಿಯ ತಾಯಿ ಬಿಕ್ಕಳಿಸಿ ಅತ್ತ ಮನಕಲಕುವ ಘಟನೆ ವರದಿಯಾಗಿದೆ.

ಜಮ್ಮು ಕಾಶ್ಮೀರ ವಿಶೇಷ ಪೊಲೀಸ್ ಅಧಿಕಾರಿ ಬಿಲಾಲ್ ಅಹ್ಮದ್ ಮಗ್ರೆ ಅವರು 2019ರಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯೊಂದರಲ್ಲಿ ಹುತಾತ್ಮರಾಗಿದ್ದರು. ಬಿಲಾಲ್ ಅಹ್ಮದ್ ಅವರು ಹೇಗೆ ಈ ಕಾರ್ಯಾಚರಣೆಯಲ್ಲಿ ತಾವು ತೀವ್ರವಾಗಿ ಗಾಯಗೊಂಡಿದ್ದರೂ ನಾಗರಿಕರನ್ನು ಸುರಕ್ಷಿತವಾಗಿ ತೆರವುಗೊಳಿಸಿದ್ದರೆಂಬ ಕುರಿತ ಮಾಹಿತಿಯನ್ನು ಉದ್ಘೋಷಕಿ ನೀಡುತ್ತಿದ್ದಂತೆಯೇ ಸಾರಾ ಬೇಗಂ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು.

ನಂತರ ಭದ್ರತಾ ಸಿಬ್ಬಂದಿಗಳು ಅವರನ್ನು ಬೆನ್ನು ತಟ್ಟಿ ಸಮಾಧಾನಿಸಿ ಅವರ ಸ್ಥಾನಕ್ಕೆ ಕರೆದೊಯ್ದರು. ಅವರ ಎದುರಿನ ಸಾಲಿನಲ್ಲಿ ಕುಳಿತಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಸಾರಾ ಬೇಗಂ ರನ್ನು ಸಮಾಧಾನ ಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News