ರಷ್ಯಾದಲ್ಲಿ ಕಲ್ಲಿದ್ದಲು ಗಣಿ ದುರಂತ : ಕಾರ್ಮಿಕರು, ರಕ್ಷಣಾ ತಂಡದ ಸಿಬ್ಬಂದಿ ಸೇರಿ 52 ಮಂದಿ ಮೃತ್ಯು

Update: 2021-11-26 03:41 GMT
ಗಣಿಯ ಬಳಿ ರಕ್ಷಣಾ ಸಿಬ್ಬಂದಿ

ಮಾಸ್ಕೊ: ರಷ್ಯಾದ ಕೆಮೆರೊವೊ ಎಂಬಲ್ಲಿನ ಕಲ್ಲಿದ್ದಲು ಗಣಿಯಲ್ಲಿ ದಟ್ಟ ಹೊಗೆ ಆವರಿಸಿದ ಪರಿಣಾಮವಾಗಿ ಕಾರ್ಮಿಕರು, ರಕ್ಷಣಾ ತಂಡದ 6 ಸಿಬ್ಬಂದಿ ಸೇರಿ ಒಟ್ಟು 52 ಜನ ಮೃತಪಟ್ಟಿದ್ದಾರೆ.

ಈ ಐದು ವರ್ಷಗಳಲ್ಲಿ ರಷ್ಯಾದಲ್ಲಿ ನಡೆದ ಅತಿ ದೊಡ್ಡ ಗಣಿ ದುರಂತ ಇದಾಗಿದೆ ಎಂದು ಸುದ್ದಿ ಸಂಸ್ಥೆ ‘ಕ್ಸಿನ್ಹುವಾ’ ವರದಿ ಮಾಡಿದೆ.

ಗಣಿ ದುರಂತದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಮತ್ತೊಂದು ಸುದ್ದಿ ಸಂಸ್ಥೆ ‘ಟಿಎಎಸ್‌ಎಸ್‌’ ವರದಿ ಮಾಡಿದೆ. ಮೃತದೇಹಗಳು ಗಣಿಯ ಆಳದಲ್ಲಿದ್ದು, ತಾಪಮಾನ ಮತ್ತು ಮೀಥೇನ್ ಸಾಂದ್ರತೆ ಕಡಿಮೆಯಾದ ನಂತರವೇ ಅವುಗಳನ್ನು ಮೇಲಕ್ಕೆ ತರಲಾಗುತ್ತದೆ ಎಂದು ಹೇಳಲಾಗಿದೆ.

ಕಲ್ಲಿದ್ದಲು ಗಣಿಯ 250 ಮೀಟರ್ ಆಳದ ವರೆಗೆ ಹೊಗೆ ಆವರಿಸಿದ ಪರಿಣಾಮ 11 ಗಣಿ ಕಾರ್ಮಿಕರು ಮೃತಪಟ್ಟಿರುವುದಾಗಿ ಈ ಮೊದಲು ವರದಿಯಾಗಿತ್ತು. ಅಂತಿಮವಾಗಿ 52 ಮಂದಿ ಮೃತಪಟ್ಟಿರುವುದಾಗಿ ಖಚಿತವಾಗಿದೆ.

ಸುರಕ್ಷತಾ ಕ್ರಮಗಳ ಉಲ್ಲಂಘನೆ ಆರೋಪದಲ್ಲಿ ಗಣಿಯ ಹಿರಿಯ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ ಎಂದು 'ಎಎಫ್‌ಪಿ' ವರದಿ ಮಾಡಿದೆ. ಗಣಿ ದುರಂತಕ್ಕೆ ರಷ್ಯಾ ಆಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಬೇಸರ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News