ಬೆಂಗಳೂರಿನಲ್ಲಿ ಭೂಕಂಪನ ಆಗಿಲ್ಲ: ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಸ್ಪಷ್ಟನೆ

Update: 2021-11-26 14:08 GMT

ಬೆಂಗಳೂರು: ನಗರದ ಹೊರ ವಲಯದ ಹಲವೆಡೆ ಶುಕ್ರವಾರ ಬೆಳಿಗ್ಗೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಆದರೆ ಇದು ಭೂಕಂಪನವಲ್ಲ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್‍ಎನ್‍ಡಿಎಂಸಿ) ಸ್ಪಷ್ಟಪಡಿಸಿದೆ.

ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲಿಪುರ ಸೇರಿದಂತೆ ನಗರದ ಹಲವೆಡೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಜನರಲ್ಲಿ ಆತಂಕ ಮೂಡಿಸಿತ್ತು. ಇದೀಗ ಭೂಕಂಪದ ಯಾವುದೇ ಲಕ್ಷಣ ದಾಖಲಾಗಿಲ್ಲ ಎಂದು ಕೆಎಸ್‍ಎನ್‍ಡಿಎಂಸಿ ಸ್ಪಷ್ಟಪಡಿಸಿದೆ. 

ಭಯಬೇಡ:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೇಳಿ ಬಂದಿರುವ ದೊಡ್ಡ ಪ್ರಮಾಣದ ಶಬ್ದದ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ. ನಾನು ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಯಾರೂ ಆತಂಕಕ್ಕೆ ಒಳಗಾಗಬೇಡಿ.’ 

ಆರ್.ಅಶೋಕ್ - ಕಂದಾಯ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News