ಒಮಿಕ್ರಾನ್ ಪ್ರಬೇಧ ಪತ್ತೆಹಚ್ಚಿದ್ದಕ್ಕೆ ನಮಗೆ ಶಿಕ್ಷೆ: ದಕ್ಷಿಣ ಆಫ್ರಿಕಾ ದೂರು

Update: 2021-11-27 16:36 GMT
ಸಾಂದರ್ಭಿಕ ಚಿತ್ರ

ಜೊಹಾನ್ಸ್‌ಬರ್ಗ್, ನ.27: ಕೊರೋನ ಸೋಂಕಿನ ಹೊಸ ಪ್ರಬೇಧ ಒಮ್ರಿಕಾನ್ ಪತ್ತೆಹಚ್ಚಿದ್ದಕ್ಕೆ ತಮ್ಮನ್ನು ಶಿಕ್ಷಿಸಲಾಗುತ್ತಿದೆ ಎಂದು ದಕ್ಷಿಣ ಆಫ್ರಿಕಾ ದೂರಿದೆ.

ಹಲವು ದೇಶಗಳು ದಕ್ಷಿಣ ಆಫ್ರಿಕಾ ಸಹಿತ 7 ದೇಶಗಳಿಂದ ನೇರ ವಿಮಾನಸಂಚಾರ ನಿಬರ್ಂಧಿಸಿರುವುದು ‘ಸೋಂಕಿನ ಹೊಸ ಪ್ರಬೇಧ ಪತ್ತೆಹಚ್ಚುವ ಮೂಲಕ ತಳಿವಿಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯನ್ನು ಮತ್ತು ನೂತನ ಪ್ರಬೇಧವನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಶಿಕ್ಷಿಸಿದಂತಾಗಿದೆ’ ಎಂದು ದಕ್ಷಿಣ ಆಫ್ರಿಕಾದ ವಿದೇಶ ವ್ಯವಹಾರ ಇಲಾಖೆ ಹೇಳಿದೆ.

ವಿಜ್ಞಾನ ಕ್ಷೇತ್ರದ ಉತ್ಕೃಷ್ಟತೆಯನ್ನು ಶ್ಲಾಘಿಸಬೇಕು, ಶಿಕ್ಷಿಸುವುದಲ್ಲ. ನೂತನ ಪ್ರಬೇಧ ವಿಶ್ವದ ಇತರೆಡೆಯೂ ಪತ್ತೆಯಾಗಿದೆ. ಆದರೆ ಇದರಲ್ಲಿ ಪ್ರತಿಯೊಂದು ಪ್ರಕರಣಕ್ಕೂ ಆಫ್ರಿಕಾದ ಜತೆ ಸಂಬಂಧವಿಲ್ಲ. ಆದರೂ ಈ ರಾಷ್ಟ್ರಗಳೊಂದಿಗೆ ವಿಶ್ವದ ಪ್ರತಿಕ್ರಿಯೆ ವಿಭಿನ್ನವಾಗಿದೆ. ಸೋಂಕಿನ ಪರೀಕ್ಷೆ, ಲಸಿಕಾಕರಣ ಕಾರ್ಯಕ್ರಮದ ಜತೆಗೆ ದೇಶದಲ್ಲಿರುವ ವಿಶ್ವದರ್ಜೆಯ ವೈಜ್ಞಾನಿಕ ಸಮುದಾಯದ ಹಿನ್ನೆಲೆಯಲ್ಲಿ , ಸಾಂಕ್ರಾಮಿಕವನ್ನು ನಿರ್ವಹಿಸುವಲ್ಲಿ ನಾವು ಕೂಡಾ ಅವರಂತೆಯೇ ಮುಂಚೂಣಿ ಸಾಲಿನಲ್ಲಿದ್ದೇವೆ ಎಂದು ನಮ್ಮ ಜಾಗತಿಕ ಸಹಭಾಗಿಗಳು ನಿರಾಳವಾಗಿರಬೇಕು. ಆದರೆ, ಇಲ್ಲಿ ನಮ್ಮನ್ನು ಶಿಕ್ಷಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿಕೆ ತಿಳಿಸಿದೆ.

ಒಮ್ರಿಕಾನ್ ಪ್ರಬೇಧವನ್ನು ಆತಂಕಕಾರಿ ವೈರಸ್‌ನ ಪಟ್ಟಿಗೆ ಸೇರಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News