ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 14 ದಿನಗಳ ಪ್ರಯಾಣ ಇತಿಹಾಸ ಸಲ್ಲಿಕೆ ಕಡ್ಡಾಯ: ಕೇಂದ್ರ ಸರಕಾರ

Update: 2021-11-28 16:43 GMT
ಸಾಂದರ್ಭಿಕ ಚಿತ್ರ (PTI)

ಮುಂಬೈ: ಅಂತಾರಾಷ್ಟ್ರೀಯ ಪ್ರಯಾಣಿಕರು 14 ದಿನಗಳ ಪ್ರಯಾಣದ ಇತಿಹಾಸ ಸಲ್ಲಿಸುವಂತೆ ಹಾಗೂ ಕೋವಿಡ್ ಪರೀಕ್ಷೆಯ ನೆಗೆಟಿವ್ ಫಲಿತಾಂಶದ ಪ್ರಮಾಣ ಪತ್ರವನ್ನು ಅಪ್‌ಲೋಡ್ ಮಾಡುವಂತೆ ಕೇಂದ್ರ ಸರಕಾರ ರವಿವಾರ ಸೂಚಿಸಿದೆ.

ಕೊರೋನದ ರೂಪಾಂತರ ಪ್ರಬೇಧ ‘ಒಮಿಕ್ರೋನ್’ ಹರಡುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ಪ್ರಯಾಣ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಪರಿಷ್ಕರಿಸಿದೆ.

ಪ್ರಯಾಣಿಕರು ಸ್ವಘೋಷಣೆಯ ಅರ್ಜಿಯನ್ನು ಆನ್‌ಲೈನ್ ಏರ್ ಸುವಿಧಾ ಪೋರ್ಟಲ್‌ನಲ್ಲಿ ಸಲ್ಲಿಸಬೇಕು. ಅಲ್ಲದೆ, ಎರಡು ವಾರಗಳ ಪ್ರಯಾಣ ಇತಿಹಾಸವನ್ನು ಅದರೊಂದಿಗೆ ಸೇರಿಸಬೇಕು. ಅವರು ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಅಪ್‌ಲೋಡ್ ಮಾಡುವ ಅಗತ್ಯತೆ ಇದೆ. ಈ ಪರೀಕ್ಷೆ ಪ್ರಯಾಣದ 72 ಗಂಟೆಗಳ ಒಳಗೆ ನಡೆಸಿರಬೇಕು ಎಂದು ಅದು ತಿಳಿಸಿದೆ.

ಹೊಸ ಮಾರ್ಗಸೂಚಿ 2021 ಡಿಸೆಂಬರ್ 1ರಂದು ಅಸ್ತಿತ್ವಕ್ಕೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News