ಓಮೈಕ್ರಾನ್ ಕುರಿತು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳಿಂದ ಹೊಸ ಎಚ್ಚರಿಕೆ

Update: 2021-12-02 05:10 GMT

ಜೋಹಾನ್ಸ್ ಬರ್ಗ್: ಓಮಿಕ್ರಾನ್ ರೂಪಾಂತರವು ಸೌಮ್ಯವಾದ ಅನಾರೋಗ್ಯವನ್ನು ಮಾತ್ರ ಉಂಟುಮಾಡುತ್ತದೆ ಎಂದು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ  ಎಂದು ದಕ್ಷಿಣ ಆಫ್ರಿಕಾದ ಪ್ರಮುಖ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಕೊರೋನವೈರಸ್ ಹೊಸ ರೂಪಾಂತರದ ನಿಜವಾದ ಪರಿಣಾಮವನ್ನು ನಿರ್ಧರಿಸುವುದು ಪ್ರಸ್ತುತ ಕಷ್ಟಕರವಾಗಿದೆ.  ಏಕೆಂದರೆ ಇದು ಇಲ್ಲಿಯವರೆಗೆ ಹೆಚ್ಚಾಗಿ ರೋಗಕಾರಕದ ವಿರುದ್ಧ ಹೋರಾಡಲು ಸಮರ್ಥವಾಗಿರುವ ಯುವಜನರ ಮೇಲೆ ಪರಿಣಾಮ ಬೀರಿದೆ ಹಾಗೂ  ಸ್ವಲ್ಪ ಸಮಯದವರೆಗೆ ವೈರಸ್ ಅನ್ನು ಹೊತ್ತ ನಂತರ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ 8,561 ಸೋಂಕುಗಳು ಪತ್ತೆಯಾಗಿದೆ  ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕಬಲ್ ಡಿಸೀಸ್ ತಿಳಿಸಿದೆ.  ಓಮೈಕ್ರಾನ್ ಈಗ ದೇಶದಲ್ಲಿ ಪ್ರಬಲವಾದ ತಳಿಯಾಗಿದೆ.

ಇತ್ತೀಚಿನ ಸೋಂಕುಗಳು "ಹೆಚ್ಚಾಗಿ ಕಿರಿಯ ವಯಸ್ಸಿನ ಗುಂಪುಗಳಲ್ಲಿ ಕಂಡುಬಂದಿದೆ. ಆದರೆ ನಾವು ವಯೋವೃದ್ಧ ಗುಂಪಿನವರತ್ತ ನಾವು ನೋಡಲು  ಆರಂಭಿಸುತ್ತಿದ್ದೇವೆ" ಎಂದು ಎನ್ಐಸಿಡಿಯಲ್ಲಿ ಸಾರ್ವಜನಿಕ ಆರೋಗ್ಯ ಕಣ್ಗಾವಲು ಮತ್ತು ಪ್ರತಿಕ್ರಿಯೆಯ ಮುಖ್ಯಸ್ಥ ಮಿಚೆಲ್ ತಿಳಿಸಿದರು

ನವೆಂಬರ್ 25 ರಂದು ದಕ್ಷಿಣ ಆಫ್ರಿಕಾದ ಸರಕಾರ ಹಾಗೂ  ವಿಜ್ಞಾನಿಗಳು ಕೊರೋನ  ಹೊಸ ರೂಪಾಂತರವನ್ನು ಘೋಷಿಸಿದ್ದರು., ನಂತರ ವಿಶ್ವ ಆರೋಗ್ಯ ಸಂಸ್ಥೆಯು  ಇದಕ್ಕೆ ಓಮೈಕ್ರಾನ್  ಎಂದು ಹೆಸರಿಟ್ಟಿದೆ.  ಈ ವೈರಸ್ ಹಲವಾರು ದಕ್ಷಿಣ ಆಫ್ರಿಕನ್ ರಾಷ್ಟ್ರಗಳ ಮೇಲೆ ಪ್ರಯಾಣ ನಿಷೇಧವನ್ನು ಹೇರಲು ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News