ಕಳೆದ ನಾಲ್ಕೂವರೆ ವರ್ಷಗಳಲ್ಲಿ ಉತ್ತರ ಪ್ರದೇಶ ಗಲಭೆಗಳಿಂದ ಮುಕ್ತವಾಗಿದೆ: ಸಿಎಂ ಆದಿತ್ಯನಾಥ್

Update: 2021-12-03 05:33 GMT
ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ (PTI)

ಲಕ್ನೊ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯನ್ನು ಶ್ಲಾಘಿಸಿದ ಆದಿತ್ಯನಾಥ್, ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯವು ಗಲಭೆಗಳಿಂದ ಮುಕ್ತವಾಗಿದೆ ಎಂದು ಹೇಳಿದರು.

ಕೇಂದ್ರ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಸಹರಾನ್ಪುರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಆದಿತ್ಯನಾಥ್, “ಹಿಂದಿನ ಸರಕಾರಗಳು ಅಭಿವೃದ್ಧಿಯ ಅಜೆಂಡಾದ ಕೊರತೆಯನ್ನು ಹೊಂದಿದ್ದವು. ಅಭಿವೃದ್ಧಿ ಹಾಗೂ ರಾಷ್ಟ್ರೀಯತೆಗೆ ಅವಕಾಶವಿರಲಿಲ್ಲ. ಅಲ್ಲಿ ರಾಜವಂಶದ ರಾಜಕೀಯ ಹಾಗೂ  ಜಾತಿವಾದವನ್ನು ಮಾತ್ರ ಕಾಳಜಿ ವಹಿಸಲಾಗುತ್ತಿತ್ತು. ಹಿಂದಿನ ಉತ್ತರ ಪ್ರದೇಶ ಸರಕಾರದಲ್ಲಿ ಶಿಕ್ಷಣ, ಉದ್ಯೋಗ, ಬೆಳವಣಿಗೆ ಹಾಗೂ  ಬಡವರ ಅಭಿವೃದ್ಧಿಗೆ ಅವಕಾಶವಿರಲಿಲ್ಲ ಎಂದರು.

“ಕಳೆದ 4.5 ವರ್ಷಗಳಲ್ಲಿ ರಾಜ್ಯವು ಗಲಭೆಗಳಿಂದ ಮುಕ್ತವಾಗಿತ್ತು, ಜನರು ಶಾಂತಿಯುತವಾಗಿ ಹೋಳಿ, ದೀಪಾವಳಿ, ದುರ್ಗಾಪೂಜೆ ಹಾಗೂ  ಜನ್ಮಾಷ್ಟಮಿಯನ್ನು ಆಚರಿಸಬಹುದು. 500 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಿದೆ ಹಾಗೂ  ಐತಿಹಾಸಿಕ ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆ ಸಿದ್ಧವಾಗಿದೆ. ಏಕೆಂದರೆ ದೇಶ ಇಂದು ಸುರಕ್ಷಿತ ಕೈಯಲ್ಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಉತ್ತರ ಪ್ರದೇಶವು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ಮಾ ಶಾಕಂಬರಿ ಹೆಸರಿನ ಈ ವಿಶ್ವವಿದ್ಯಾಲಯವು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನಾಯಕತ್ವದಲ್ಲಿ ಉತ್ತರ ಪ್ರದೇಶವು ಪ್ರಗತಿಯ ಹಾದಿಯಲ್ಲಿದೆ ಎಂಬುದಕ್ಕೆ ನಿದರ್ಶನವಾಗಿದೆ ಎಂದು ಆದಿತ್ಯನಾಥ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News