"ತೈವಾನ್ ಬಳಿ ಚೀನಾದ ಚಟುವಟಿಕೆ ಸಮರಾಭ್ಯಾಸ ಆಗಿರಬಹುದು": ಅಮೆರಿಕ ಹೇಳಿಕೆ

Update: 2021-12-06 18:44 GMT

ವಾಷಿಂಗ್ಟನ್, ಡಿ.6: ತೈವಾನ್‌ನ ಸಮೀಪ ಇತ್ತೀಚಿನ ದಿನಗಳಲ್ಲಿ ಚೀನಾ ಸೇನೆಯ ಚಟುವಟಿಕೆ ಹೆಚ್ಚಿದ್ದು ಇದು ಸಮರಾಭ್ಯಾಸ ಆಗಿರಬಹುದು ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡಾ ಆಸ್ಟಿನ್ ಹೇಳಿದ್ದು, ತೈವಾನ್‌ಗೆ ಅಮೆರಿಕದ ಬಲಿಷ್ಟ ಬೆಂಬಲ ಮುಂದುವರಿಯಲಿದೆ ಎಂದಿದ್ದಾರೆ. ತೈವಾನ್‌ನ ಸ್ವರಕ್ಷಣೆಯ ಸಾಮರ್ಥ್ಯವನ್ನು ಬೆಂಬಲಿಸುವುದಕ್ಕೆ ಅಮೆರಿಕ ಬದ್ಧವಾಗಿದೆ. ಪ್ರಪಂಚದ 2 ಬೃಹತ್ ಆರ್ಥಿಕ ಶಕ್ತಿಗಳಾದ ಚೀನಾ ಮತ್ತು ಅಮೆರಿಕಗಳು ಹಿತಾಸಕ್ತಿ ಮತ್ತು ಸಿದ್ಧಾಂತಗಳ ವಿಷಯದಲ್ಲಿ ನಿಜವಾದ ವ್ಯತ್ಯಾಸವನ್ನು ಹೊಂದಿವೆ. ಆದರೆ ಅವುಗಳನ್ನು ನಿರ್ವಹಿಸುವ ರೀತಿಗೆ ಮಹತ್ವವಿದೆ. ಈಗ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ಚೀನಾದ ಮುಖಂಡರು ಅಸಮಾಧಾನ ಹೊಂದಿದ್ದಾರೆ ಮತ್ತು ಅಮೆರಿಕವನ್ನು ಜಾಗತಿಕ ನಾಯಕತ್ವದ ಸ್ಥಾನದಿಂದ ಸ್ಥಳಾಂತರಿಸುವ ಗುರಿ ಹೊಂದಿದ್ದಾರೆ 

ಎಂದು ಆಸ್ಟಿನ್ ಹೇಳಿದ್ದಾರೆ. ಕ್ಯಾಲಿಫೋರ್ನಿಯಾದ ರೇಗನ್ ಪ್ರೆಸಿಡೆನ್ಶಿಯಲ್ ಲೈಬ್ರೆರಿಯಲ್ಲಿ ನಡೆದ ರಾಷ್ಟ್ರೀಯ ರಕ್ಷಣಾ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ತೈವಾನ್ ಬಳಿ ಚೀನಾವು ವಾಯು ಮತ್ತು ಸಮುದ್ರ ಕ್ಷೇತ್ರದಲ್ಲಿನ ಚಟುವಟಿಕೆ ತೀವ್ರಗೊಳಿಸಿದ್ದು ತಮ್ಮ ಪೂರ್ಣ ಸಾಮರ್ಥ್ಯ ಬಳಸುತ್ತಿರುವಂತೆ ಭಾಸವಾಗುತ್ತಿದೆ. ಇದು ಸಮರಾಭ್ಯಾಸದಂತೆ ಕಾಣುತ್ತಿದೆ. ಸ್ಥಿರ ಮತ್ತು ಮುಕ್ತ ಅಂತರಾಷ್ಟ್ರೀಯ ನಿರಂತರ ಸವಾಲನ್ನು ಮುಂದುವರಿಸಲು ತನ್ನ ಆರ್ಥಿಕ, ರಾಜತಾಂತ್ರಿಕ, ಸೇನೆ ಮತ್ತು ತಾಂತ್ರಿಕ ಶಕ್ತಿಯನ್ನು ಬಳಸುವ ಸಾಮರ್ಥ್ಯವಿರುವ ಏಕೈಕ ದೇಶವಾಗಿದೆ ಚೀನಾ 
 ಎಂದವರು ಹೇಳಿದ್ದಾರೆ. ಆದರೆ ಯುದ್ಧ ಅಥವಾ ಬಿಕ್ಕಟ್ಟು ಸೃಷ್ಟಿಯಾಗಲಿ ಎಂದು ನಾವಂತೂ ಬಯಸುವುದಿಲ್ಲ. ಮತ್ತೊಂದು ಶೀತಲ ಯುದ್ಧ ಅಥವಾ ವಿಶ್ವ ಎರಡು ಬಣಗಳಾಗಿ ವಿಭಜನೆಗೊಳ್ಳುವುದು ನಮಗಿಷ್ಟವಿಲ್ಲ. ಏಕ ಚೀನಾ ನೀತಿಗೆ ನಾವು ಬದ್ಧರಾಗಿದ್ದೇವೆ. ಆದರೆ ತೈವಾನ್‌ನ ಸ್ವಯಂ ರಕ್ಷಣೆಯ ಸಾಮರ್ಥ್ಯವನ್ನು ಬೆಂಬಲಿಸುವುದು ಮತ್ತು ತೈವಾನ್ ಜನತೆಯ ಭದ್ರತೆಗೆ ಬೆದರಿಕೆ ಒಡ್ಡುವ ಯಾವುದೇ ಶಕ್ತಿಯನ್ನು ತಡೆಯುವ ನಮ್ಮ ಸಾಮರ್ಥ್ಯವನ್ನೂ ಉಳಿಸಿಕೊಳ್ಳುವುದಕ್ಕೆ ಬದ್ಧರಾಗಿದ್ದೇವೆ ಎಂದು ಆಸ್ಟಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News