ಜನವರಿಯಿಂದ ಎಟಿಎಂ ಬಳಸಿ ಹಣ ಪಡೆದುಕೊಳ್ಳುವುದು ದುಬಾರಿಯಾಗಲಿದೆ: ವರದಿ

Update: 2021-12-07 06:21 GMT

ಹೊಸದಿಲ್ಲಿ:  ಮುಂದಿನ ವರ್ಷದ ಜನವರಿಯಿಂದ ಎಟಿಎಂಗಳಿಂದ ಒಂದು ನಿಗದಿತ ಮಿತಿಗಿಂತ ಹೆಚ್ಚು ಬಾರಿ ಹಣ ವಿದ್‍ಡ್ರಾ ಮಾಡುವ ಗ್ರಾಹಕರು ಹೆಚ್ಚಿನ ಶುಲ್ಕ ನೀಡಬೇಕಿದೆ. ಈ ಕುರಿತು  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಅಧಿಸೂಚನೆ ಹೊರಡಿಸಿದೆ ಎಂದು moneycontrol.com ವರದಿ ಮಾಡಿದೆ.

ತಾವು ಖಾತೆಯನ್ನು ಹೊಂದಿರುವ ಬ್ಯಾಂಕಿನ ಎಟಿಎಂಗಳಿಂದ ಹಣ ವಿದ್‍ಡ್ರಾ ಮಾಡುವ ಗ್ರಾಹಕರು ನಿಗದಿತ ಮಿತಿಯನ್ನು ದಾಟಿದಲ್ಲಿ ತಲಾ ವಿದ್‍ಡ್ರಾ ಗೆ ರೂ 21 ಪಾವತಿಸಬೇಕಿದೆ. ಪ್ರಸಕ್ತ ಈ ಶುಲ್ಕದ ಮೊತ್ತ ರೂ 20 ಆಗಿದೆ.

ಪ್ರತಿ ತಿಂಗಳು ಡೆಬಿಟ್ ಕಾರ್ಡ್‍ದಾರರು ಐದು ಬಾರಿ ಎಟಿಎಂ ಮೂಲಕ ಯಾವುದೇ ಶುಲ್ಕವಿಲ್ಲದೆ ಹಣ ವಿದ್‍ಡ್ರಾ ಮಾಡಬಹುದಾದರೆ ಈ ಮಿತಿ ದಾಟಿದ ನಂತರ ಆರ್‍ಬಿಐ ವಿಧಿಸಿದ ರೂ 21 ಶುಲ್ಕವನ್ನು ತಲಾ ಬಳಕೆಗೆ ಬಳಸಲಾಗುವುದು ಎಂದು ವರದಿ ತಿಳಿಸಿದೆ.

ಇತರ ಬ್ಯಾಂಕುಗಳ ಎಟಿಎಂ ಕೇಂದ್ರಗಳಲ್ಲಿ ಗ್ರಾಹಕರು ಪ್ರತಿ ತಿಂಗಳು ಮೂರು ಬಾರಿ ಯಾವುದೇ ಶುಲ್ಕವಿಲ್ಲದೆ ಹಣ ವಿದ್‍ಡ್ರಾ ಮಾಡಬಹುದು. ಇದು ಮೆಟ್ರೋ ನಗರಗಳಿಗೆ ಅನ್ವಯಿಸುವ ನಿಯಮವಾದರೆ, ಮೆಟ್ರೋ ಅಲ್ಲದ ನಗರಗಳಲ್ಲಿ ಇತರ ಬ್ಯಾಂಕುಗಳ ಎಟಿಎಂಗಳಿಂದ ಗ್ರಾಹಕರು ಐದು ಬಾರಿ ಶುಲ್ಕವಿಲ್ಲದೆ ಹಣ ವಿದ್‍ಡ್ರಾ ಮಾಡಬಹುದು.

ಎಚ್‍ಡಿಎಫ್‍ಸಿ, ಆಕ್ಸಿಸ್ ಬ್ಯಾಂಕ್‍ಗಳು ಈಗಾಗಲೇ ಈ ಕುರಿತು ಗ್ರಾಹಕರಿಗೆ ಸೂಚಿಸಿದ್ದು ಹೆಚ್ಚುವರಿ ಶುಲ್ಕ ರೂ 21 ಹೊರತಾಗಿ ತೆರಿಗೆಗಳು ಅನ್ವಯಿಸುತ್ತವೆ ಎಂದು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News