ಮೂರು ಕೃಷಿ ಕಾನೂನುಗಳನ್ನು ಮುಂದಿನ ದಿನಗಳಲ್ಲಿ ಮರು ಪರಿಚಯಿಸಬಹುದು: ಕೇಂದ್ರ ಕೃಷಿ ಸಚಿವ ತೋಮರ್

Update: 2021-12-25 07:07 GMT
 ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Photo: twitter)

ನಾಗ್ಪುರ (ಮಹಾರಾಷ್ಟ್ರ): ಲಕ್ಷಗಟ್ಟಲೆ ರೈತರಿಂದ ರಾಷ್ಟ್ರವ್ಯಾಪಿ ಉಗ್ರವಾದ (ಕೆಲವೊಮ್ಮೆ ಹಿಂಸಾತ್ಮಕ) ಪ್ರತಿಭಟನೆಗಳನ್ನು ಹುಟ್ಟುಹಾಕಿದ ನಂತರ ಕಳೆದ ತಿಂಗಳು ಕೇಂದ್ರ ಸರಕಾರವು ಹಿಂತೆಗೆದುಕೊಂಡ ಮೂರು ಕೃಷಿ ಕಾನೂನುಗಳನ್ನು ಮುಂದಿನ ದಿನಗಳಲ್ಲಿ ಮರು ಪರಿಚಯಿಸಬಹುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

 ನಿನ್ನೆ ಮಹಾರಾಷ್ಟ್ರದಲ್ಲಿ ನಡೆದ ಆಗ್ರೊ ವಿಷನ್ ಎಕ್ಸ್ ಪೋ ಕಾರ್ಯಕ್ರಮವೊಂದರಲ್ಲಿ ಕೃಷಿ ಕಾಯ್ದೆಗಳನ್ನು ಮತ್ತೆ ತರುವ ಕುರಿತು ತೋಮರ್ ಸುಳಿವು ನೀಡಿದ್ದಾರೆ.

"ನಾವು ಕೃಷಿ ತಿದ್ದುಪಡಿ ಕಾನೂನುಗಳನ್ನು ತಂದಿದ್ದೇವೆ. ಆದರೆ ಕೆಲವು ಜನರು ಈ ಕಾನೂನುಗಳನ್ನು ಇಷ್ಟಪಡಲಿಲ್ಲ. ಇದು ಸ್ವಾತಂತ್ರ್ಯದ 70 ವರ್ಷಗಳ ನಂತರ  ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೊಡ್ಡ ಸುಧಾರಣೆಯಾಗಿದೆ" ಎಂದು ಕೃಷಿ ಸಚಿವರು ಹೇಳಿದರು.

"ಆದರೆ ಸರಕಾರ ನಿರಾಶೆಗೊಂಡಿಲ್ಲ ... ನಾವು ಒಂದು ಹೆಜ್ಜೆ ಹಿಂದೆ ಸರಿದಿದ್ದೇವೆ ಹಾಗೂ  ನಾವು ಮತ್ತೆ ಮುಂದುವರಿಯುತ್ತೇವೆ.  ಏಕೆಂದರೆ ರೈತರು ಭಾರತದ ಬೆನ್ನೆಲುಬು" ಎಂದು ತೋಮರ್ ಹೇಳಿದರು.

 ಉತ್ತರಪ್ರದೇಶ ಹಾಗೂ ಪಂಜಾಬ್‌ನಲ್ಲಿ (ರೈತರ ಮತಗಳು ಪ್ರಮುಖವಾಗಿರುವ) ಚುನಾವಣೆಗೆ ಕೇವಲ ಮೂರು ತಿಂಗಳ ಮೊದಲು ಕಳೆದ ತಿಂಗಳು ಪ್ರಧಾನಿ ಮೋದಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News