ವಾರ್ತಾಭಾರತಿಯ 19ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿದ ಶಿವರಾಜ್ ಕುಮಾರ್
Update: 2021-12-29 13:57 IST
ಬೆಂಗಳೂರು, ಡಿ.29: ಜನದನಿಯ ಸಾರಥಿ 'ವಾರ್ತಾಭಾರತಿ' ಕನ್ನಡ ದೈನಿಕದ 19ನೇ ವಾರ್ಷಿಕ ವಿಶೇಷಾಂಕವನ್ನು ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಬುಧವಾರ ಬಿಡುಗಡೆ ಮಾಡಿದರು.
ನಗರದ ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ತಮ್ಮ ನಿವಾಸದಲ್ಲಿ ವಿಶೇಷಾಂಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಶಿವರಾಜ್ ಕುಮಾರ್, 'ವಾರ್ತಾಭಾರತಿ' ಬಹಳ ವಿಶೇಷ ಮತ್ತು ವಿಶಿಷ್ಟ ರೀತಿಯ ಪತ್ರಿಕೆಯಾಗಿದ್ದು, ಸಮಾಜದಲ್ಲಿನ ಎಲ್ಲ ವರ್ಗದ ಧ್ವನಿಯಾಗಿ ಹೊರಬರುತ್ತಿದೆ. ಈ ಪತ್ರಿಕೆ ನೂರು ವರ್ಷಕ್ಕೂ ಮೀರಿ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ಪತ್ರಿಕೆಯ ಬೆಂಗಳೂರು ಬ್ಯೂರೋ ಮುಖ್ಯಸ್ಥ ಬಸವರಾಜು ಮೇಗಲಕೇರಿ, ಪತ್ರಿಕೆಯ ನಿರ್ದೇಶಕ ಎಸ್.ಎಂ.ಅಲಿ, ಹಿರಿಯ ವರದಿಗಾರ ಪ್ರಕಾಶ್ ರಾಮಜೋಗಿಹಳ್ಳಿ, ಪತ್ರಕರ್ತಗಿರೀಶ್ ಕೋಟೆ ಮತ್ತಿತರರು ಉಪಸ್ಥಿತರಿದ್ದರು.