×
Ad

ನೈಟ್ ಕರ್ಫ್ಯೂ: ಬೆಂಗಳೂರಿನಲ್ಲಿ 53 ವಾಹನ ವಶಕ್ಕೆ, ಇಂದಿನಿಂದ ಫ್ಲೈ ಓವರ್ ಬಂದ್

Update: 2021-12-29 17:10 IST

ಬೆಂಗಳೂರು, ಡಿ.29: ನೈಟ್ ಕರ್ಫ್ಯೂ ಜಾರಿಯಾಗಿರುವ ವೇಳೆ ಮಂಗಳವಾರ ರಾತ್ರಿ ನಗರದಲ್ಲಿ ಅನಗತ್ಯವಾಗಿ ಸಂಚರಿಸಿದ 53 ವಾಹನಗಳನ್ನು ಪಶ್ಚಿಮ ವಿಭಾಗದ ಪೊಲೀಸರು ವಶಪಡಿಸಿಕೊಂಡು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ. 

ನೈಟ್ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಟ ನಡೆಸಿದ 53 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. 

ಪಶ್ಚಿಮ ವಿಭಾಗದಲ್ಲಿ 50 ದ್ವಿಚಕ್ರ ವಾಹನಗಳು, 3 ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಇನ್ನು ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಇಂದಿನಿಂದ ಜಕ್ಕೂರು, ಕೆಆರ್ ಮಾರ್ಕೆಟ್ ಸೇರಿದಂತೆ ನಗರದ ಎಲ್ಲ ಮೇಲ್ಸುತುವೆ ಬಂದ್ ಆಗಲಿದ್ದು, ಅಗತ್ಯವಿರುವ ವಾಹನಗಳು ನಿರ್ದಿಷ್ಟ ಕಾರಣ ನೀಡಿ ಸರ್ವಿಸ್ ರಸ್ತೆ ಮುಖಾಂತರ ತೆರಳಲು ಅವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News