ಶಿಕ್ಷಣ ಸಚಿವರ ವರ್ತನೆ ಖಂಡನೀಯ: ಕ್ಷಮೆ ಯಾಚನೆಗೆ ವೆಲ್ಫೇರ್ ಪಾರ್ಟಿ ಒತ್ತಾಯ
ಬೆಂಗಳೂರು, ಜ.2: ರಾಜ್ಯದ ಸಚಿವರ ಪಟ್ಟಿಯಲ್ಲಿ ಸೌಮ್ಯ ಸ್ವಭಾವದ ವ್ಯಕ್ತಿತ್ವ ಇರುವ ಶಿಕ್ಷಣ ಸಚಿವರ ವರ್ತನೆ ಬೇಸರ ಮೂಡಿಸಿದೆ. ಸಹಾಯ ಕೋರಿ ಬಂದವರಿಗೆ ಇಷ್ಟವಿದ್ದರೆ ಕೆಲಸ ಮಾಡಿ ಇಲ್ಲದಿದ್ದರೆ ಬೇರೆ ದಾರಿ ನೋಡಿಕೊಳ್ಳಿ ಎಂದು ಉಡಾಫೆಯಾಗಿ ಮಾತನಾಡುವ ಮೂಲಕ ಅತಿಥಿ ಉಪನ್ಯಾಸಕರ ಮನ ನೋಯಿಸಿರು ವ ಘಟನೆ ಖಂಡನೀಯ. ಕೂಡಲೆ ಸಚಿವರು ಕ್ಷಮೆ ಯಾಚಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹಿರ್ ಹುಸೇನ್ ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರ ಅಸಹಾಯಕರ ಪರವಿಲ್ಲ ಎನ್ನುವುದನ್ನು ಸಚಿವರ ವರ್ತನೆ ಸಾಬೀತು ಪಡಿಸಿದಂತಿದೆ. ಹತ್ತಾರು ವರ್ಷಗಳಿಂದ ಸೇವಾ ಭದ್ರತೆ ಇಲ್ಲದೆ ಕನಿಷ್ಠ ವೇತನ ಪಡೆದು ನಿಯತ್ತಾಗಿ ದುಡಿಯುತ್ತಿರುವ ಅತಿಥಿ ಉಪನ್ಯಾಸಕರ ಪರವಾಗಿ ನಿರ್ಣಯ ಕೈಗೊಳ್ಳುವ ಬದಲು ಅವರನ್ನು ಅವಮಾನ ಮಾಡಿರುವ ಪ್ರಕರಣ ನಾಚಿಕೆಗೇಡು. ಅತಿಥಿ ಉಪನ್ಯಾಸಕರ ಸಂಘದ ಸಮಸ್ಯೆಗಳ ನಿವಾರಣೆಗೆ ಕೂಡಲೆ ಸರಕಾರ ಮುಂದಾಗಬೇಕು. ನಿಂದನೆ ಮಾಡಿರುವ ಬಗ್ಗೆ ಸಚಿವರು ಕ್ಷಮೆ ಯಾಚಿಸಬೇಕು ಎಂದು ತಾಹಿರ್ ಹುಸೇನ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.