ಅಮೆರಿಕ: ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಗುಂಡಿನ ದಾಳಿ: 3 ಮಂದಿ ಮೃತ್ಯು

Update: 2022-01-02 18:42 GMT

ನ್ಯೂಯಾರ್ಕ್, ಜ.2: 2021ರ ಡಿ.31ರ ಮಧ್ಯರಾತ್ರಿ ಅಮೆರಿಕದ ಮಿಸಿಸ್ಸಿಪಿಯಲ್ಲಿ ನಡೆಯುತ್ತಿದ್ದ ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭ ಹಲವರು ಗುಂಡು ಹಾರಿಸಿದ್ದರಿಂದ 3 ಮಂದಿ ಮೃತಪಟ್ಟಿದ್ದು ಕನಿಷ್ಟ 4 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ‌

ಗಲ್ಫ್‌ ಪೋರ್ಟ್ ಹೊಸ ವರ್ಷದ ಸಂಭ್ರಮಾಚರಣೆ ಕೂಟದಲ್ಲಿ ಈ ಘಟನೆ ನಡೆದಿದೆ. ಹಲವು ಗನ್ಗಳಿಂದ 50ಕ್ಕೂ ಅಧಿಕ ಬುಲೆಟ್ಗಳನ್ನು ಹಾರಿಸಲಾಗಿದ್ದು ಅಲ್ಲಿ ಸೇರಿದ್ದವರು ಕಂಗೆಟ್ಟು ದಿಕ್ಕಾಪಾಲಾಗಿ ಓಡಿದ್ದಾರೆ. ಪ್ರಕರಣದ ಪ್ರತ್ಯಕ್ಷದರ್ಶಿಗಳು ಮತ್ತು ಗಾಯಗೊಂಡವರು ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳಲು ಸಿದ್ಧರಿಲ್ಲದ ಕಾರಣ ಪ್ರಕರಣದ ತನಿಖೆಗೆ ಹಿನ್ನಡೆಯಾಗಿದೆ. ಅವರ ಮನಸ್ಥಿತಿ ಅರ್ಥವಾಗುತ್ತದೆ. ಸಾರ್ವಜನಿಕವಾಗಿ ಪ್ರಚಾರಕ್ಕೆ ಬರಲು ಅವರು ಹಿಂಜರಿಯುತ್ತಿದ್ದಾರೆ. ಆದರೆ ಫೋನ್ನ ಮೂಲಕ ಅವರು ಮಾಹಿತಿ ಹಂಚಿಕೊಳ್ಳಬಹುದು. ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಗಲ್ಫ್‌ ಪೋರ್ಟ್ ಪೊಲೀಸ್ ವಿಭಾಗದ ಮುಖಸ್ಥ ಕ್ರಿಸ್ ರೈಲ್ ಹೇಳಿದ್ದಾರೆ.
  ‌
ಮೊದಲು ತಳ್ಳಾಟ ಮತ್ತು ನೂಕಾಟ ಆರಂಭಗೊಂಡಿದ್ದು ಪರಸ್ಪರ ಗುದ್ದಾಟ ನಡೆದಿದೆ. ಬಳಿಕ ಗುಂಡು ಹಾರಿಸಲಾಗಿದೆ. ಗಾಯಗೊಂಡವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಬಂದೂಕು, ಮಾದಕವಸ್ತು ಮತ್ತು ಮದ್ಯಪಾನ ದುರಂತದ ಪಾಕವಿಧಾನವಾಗಿದೆ ಎಂದು ರೈಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News