×
Ad

ಸಂಪೂರ್ಣ ಲಾಕ್ ಡೌನ್ ವಿಚಾರ ಸರಕಾರದ ಮುಂದಿಲ್ಲ: ಸಚಿವ ಡಾ.ಸುಧಾಕರ್

Update: 2022-01-07 10:49 IST

ಬೆಂಗಳೂರು, ಜ.7: ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ. ರಾಜ್ಯದಲ್ಲಿ ಮತ್ತೆ ಸಂಪೂರ್ಣ ಲಾಕ್ ಡೌನ್ ಮಾಡುವ ವಿಚಾರ ಸರಕಾರದ ಮುಂದಿಲ್ಲ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವಾಗುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅದನ್ನು ನಿಯಂತ್ರಿಸಲು ಸಾಧ್ಯವಿದೆ. ಈ ಹಿಂದಿನ ಎರಡು ಅಲೆಗಳನ್ನು ಎದುರಿಸಿದ ಅನುಭವ ನಮ್ಮ ಮುಂದಿದೆ. ಅದೇರೀತಿ 3ನೇ ಅಲೆಯನ್ನು ಎದುರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೋವಿಡ್ ತಡೆ ಲಸಿಕೆ ಅಭಿಯಾನವನ್ನು ಅದ್ಭುತ ರೀತಿಯಲ್ಲಿ ಮಾಡಿದ್ದೇವೆ. 99 ಶೇ. ಜನರು ಪ್ರಥಮ ಡೋಸ್ 80 ಶೇ. ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಆದ್ದರಿಂದ 3ನೇ ಅಲೇ ಅಷ್ಟೇನು ಸಮಸ್ಯೆಯಾಗದು ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಮಧ್ಯಾಹ್ನ ಸಭೆ

ಕೋವಿಡ್ ಗೆ ಸಂಬಂಧಿಸಿದಂತೆ ಇಂದು ಮಧ್ಯಾಹ್ನ 12:30ಕ್ಕೆ ಬಿಬಿಎಂಪಿಯ ಹಿರಿಯ ಅಧಿಕಾರಿಗಳು, ತಜ್ಞರು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಾನಾ ವಿಭಾಗಗಳ ಮುಖ್ಯಸ್ಥರು, ರಾಜ್ಯ ಕೋವಿಡ್ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ಒಳಗೊಂಡ ಸಭೆ ನಡೆಸಲಿದ್ದೇನೆ. ಸಭೆಯಲ್ಲಿ ಏಕರೂಪದ ಚಿಕಿತ್ಸಾ ಪದ್ಧತಿ,  ಟೆಸ್ಟ್, ಕೌನ್ಸೆಲಿಂಗ್, ನಿಗಾ, ಹಾಸಿಗೆ ಲಭ್ಯತೆ - ಹಂಚಿಕೆ, ಔಷಧ ದಾಸ್ತಾನು - ವಿತರಣೆ, ನಾನಾ ಆ್ಯಪ್ ಗಳ ಬಳಕೆ, ಟೆಲಿ ಐಸಿಯು ಹಾಗೂ ಇತರ ವಿಷಯಗಳ ಜೊತೆ ಪ್ರಮುಖವಾಗಿ ನಾನಾ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಕಾಯ್ದುಕೊಂಡು ನಿರ್ದಿಷ್ಟ ಹೊಣೆಗಾರಿಕೆ ಹಂಚಿಕೆ ಕುರಿತಂತೆಯೂ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News