×
Ad

ಬೆಂಗಳೂರು ಪ್ರೆಸ್‍ ಕ್ಲಬ್‍ನಲ್ಲಿ ಜ.6ರಿಂದ ಉಚಿತ ಲಸಿಕೆ ವಿತರಣೆ

Update: 2022-01-08 00:07 IST

ಬೆಂಗಳೂರು, ಜ.7: ಪ್ರೆಸ್‍ಕ್ಲಬ್ ಸದಸ್ಯರ 15ರಿಂದ 18 ವರ್ಷದ ಮಕ್ಕಳಿಗೆ ಜ.10ರಿಂದ ಉಚಿತ ಕೋವಿಡ್ ಮೊದಲ ಡೋಸ್ ಲಸಿಕೆಯನ್ನು ಹಾಕಲಾಗುತ್ತಿದೆ ಎಂದು ಬೆಂಗಳೂರು ಪ್ರೆಸ್‍ಕ್ಲಬ್ ಪ್ರಕಟನೆ ಹೊರಡಿಸಿದೆ.

ಕಳೆದ ವರ್ಷ ಕ್ಲಬ್‍ನ ಸದಸ್ಯರಿಗೆ ಮತ್ತು ಅವರ ಕುಟುಂಬದವರಿಗೆ ಯಶಸ್ವಿಯಾಗಿ ಲಸಿಕೆ ಹಾಕಲಾಗಿತ್ತು. ಈಗ ಸರಕಾರದ ನಿರ್ದೇಶನದಂತೆ ಕ್ಲಬ್‍ನ ಸದಸ್ಯರ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಹಾಗಾಗಿ ಕ್ಲಬ್‍ನ ಸದಸ್ಯರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಬೆಂಗಳೂರು ಪ್ರೆಸ್‍ಕ್ಲಬ್‍ನ ಅಧ್ಯಕ್ಷ ಕೆ. ಸದಾಶಿವ ಶೆಣೈ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News