×
Ad

ಕೋವಿಡ್ ನಿರ್ಬಂಧ ಉಲ್ಲಂಘಿಸಿದರೆ ಪ್ರಕೃತಿ ವಿಕೋಪ ತಡೆ ಕಾಯ್ದೆಯಡಿ ಕ್ರಮ: ಸಚಿವ ಆರಗ ಜ್ಞಾನೇಂದ್ರ

Update: 2022-01-08 13:59 IST
ಫೈಲ್ ಚಿತ್ರ -  ಆರಗ ಜ್ಞಾನೇಂದ್ರ 

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕು ಹಾಗೂ ಒಮೈಕ್ರಾನ್ ವೈರಾಣು ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ವಿಧಿಸಿದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಪ್ರಕೃತಿ ವಿಕೋಪ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ಧಾರೆ. 

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿರುವ ಗೃಹ ಸಚಿವರು, ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ ರಾಜಕೀಯ ಅಧಿಕಾರಕ್ಕಾಗಿ ಇರುವ ನಡಿಗೆ.  ಜನಸಾಮಾನ್ಯರಿಗೆ ಇರುವ ಕಾಯ್ದೆ ಏನಿದೆಯೋ ಅದು ಎಲ್ಲರಿಗೂ ಅನ್ವಯವಾಗುವಂತದ್ದು, ಬಿಜೆಪಿ, ಕಾಂಗ್ರೆಸ್​ಗೆ ಬೇರೆ, ಜೆಎಡಿಎಸ್​​ಗೆ ಬೇರೆ ಇಲ್ಲ ಎಂದು ತಿಳಿಸಿದರು. 

''ಜನತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆಗಳಿಗೆ ಅವಕಾಶ ಇದ್ದು, ಬೇರೆ ಸಮಯದಲ್ಲಿ ಪ್ರತಿಭಟನೆ, ಸಭೆಗಳನ್ನು ನಡೆಸಬಹುದು, ಆದರೆ ಈಗ  ಏಕೆ? ಚುನಾವಣೆಗೆ ಇನ್ನೂ ಸಮಯ ಇದೆ ಇಷ್ಟು ಬೇಗ ಏಕೆ ರಾಜಕಾರಣ ಮಾಡುತ್ತೀರಿ'' ಎಂದು ಸಚಿವರು ಪ್ರಶ್ನಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News