ಒಮೈಕ್ರಾನ್ ಸೋಂಕನ್ನು ಫ್ಲೂನಂತೆ ಪರಿಗಣಿಸದಂತೆ ಡಬ್ಲ್ಯೂಎಚ್‌ಓ ಎಚ್ಚರಿಕೆ

Update: 2022-01-11 17:35 GMT
ಸಾಂದರ್ಭಿಕ ಚಿತ್ರ

ಕೋಪನ್‌ಹೇಗನ್ ,ಜ.11: ಫ್ಲೂನಂತಹ ಸ್ಥಳೀಯವಾದಿ ಹರಡುವ ಸಾಮಾನ್ಯ ಕಾಯಿಲೆಗಳ ಮಾದರಿಯಲ್ಲಿಯೇ ಕೋವಿಡ್-19 ಸೋಂಕಿಗೂ ಚಿಕಿತ್ಸೆ ನೀಡುವುದರ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಓ) ಮಂಗಳವಾರ ಎಚ್ಚರಿಕೆ ನೀಡಿದೆ. ಕೋವಿಡ್-19ನ ಒಮೈಕ್ರಾನ್ ಪ್ರಭೇದವು ಇನ್ನೂ ಸ್ಥಿರರೂಪವನ್ನು ಪಡೆದುಕೊಂಡಿಲ್ಲವೆಂದು ಅವರು ತಿಳಿಸಿದರು.

ಕೋವಿಡ್19 ಸಾಂಕ್ರಾಮಿಕದ ಅಪಾಯಕಾರಿತ್ವವು ಕುಸಿದಿದ್ದು, ಫ್ಲೂ ಸಾಂಕ್ರಾಮಿಕದ ನಿಯಂತ್ರಣಕ್ಕೆ ಅನುಸರಿಸುವಂತಹ ವಿಧಾನಗಳನ್ನು ಒಮೈಕ್ರಾನ್ ಸೋಂಕು ನಿಯಂತ್ರಣಕ್ಕೂ ಬಳಸಿಕೊಳ್ಳಲು ಇದು ಸಕಾಲವಾಗಿದೆ ಎಂದು ಸ್ಪೇನ್‌ನ ಪ್ರಧಾನಿ ಪೆಡ್ರೊ ಸ್ಯಾಂಜೆಜ್ ಅವರು ಸೋಮವಾರ ಹೇಳಿಕೆ ನೀಡಿದ ಬೆನ್ನಲ್ಲೇ ಡಬ್ಲ್ಯೂಎಚ್‌ಓ ಈ ಎಚ್ಚರಿಕೆ ನೀಡಿದೆ.

‘‘ನಮ್ಮಲ್ಲಿ ದೊಡ್ಡ ಪ್ರಮಾಣದ ಅನಿಶ್ಚಿತತೆಯಿದೆ ಹಾಗೂ ಕೋವಿಡ್19 ವೈರಸ್ ಅತ್ಯಂತ ತ್ವರಿತವಾಗಿ ವಿಕಸನಗೊಳ್ಳುತ್ತಾ ಹೋಗುತ್ತಿರುವುದು ಹೊಸ ಸವಾಲುಗಳನ್ನು ಒಡ್ಡಿದೆ. ಕೋವಿಡ್19 ಅನ್ನು ಸ್ಥಳೀಯ ಸೋಂಕುರೋಗವೆಂದು ಕರೆಯುವ ಹಂತದಲ್ಲಿ ನಾವಿಲ್ಲ’’ ಎಂದು ಯುರೋಪ್‌ಗಾಗಿನ ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ತುರ್ತುಸ್ಥಿತಿ ಅಧಿಕಾರಿ ಕ್ಯಾಥರೀನ್ ಸ್ಮಾಲ್‌ವುಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News