ಸಿಂಗಾಪುರ,ಜಪಾನ್ ಪಾಸ್‌ಪೋರ್ಟ್ ಜಗತ್ತಿನಲ್ಲೇ ಪ್ರಭಾವಶಾಲಿ

Update: 2022-01-12 17:04 GMT
ಸಾಂದರ್ಭಿಕ ಚಿತ್ರ:PTI

ವಾಶಿಂಗ್ಟನ್,ಜ.12: ಸಿಂಗಾಪುರ ಹಾಗೂ ಜಪಾನ್ ಪಾಸ್‌ಪೋರ್ಟ್‌ಗಳು ಜಗತ್ತಿನಲ್ಲೇ ಅತ್ಯಂತ ಪ್ರಭಾವಶಾಲಿ ಎಂದು ನೂತನ ಜಾಗತಿಕ ಸೂಚ್ಯಂಕವೊಂದು ಪ್ರಕಟಿಸಿದ ದತ್ತಾಂಶಗಳಿಂದ ತಿಳಿದುಬಂದಿದೆ.

ಈ ಎರಡು ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿರುವರು ವೀಸಾ ಇಲ್ಲದೆಯೇ 192 ದೇಶಗಳಿಗೆ ಪ್ರಯಾಣಿಸಬಹುದಾಗಿದೆ ಎಂದು ಹೆನ್ಲೆ ಆ್ಯಂಡ್ ಪಾರ್ಟನರ್ಸ್‌ ಸಂಸ್ಥೆ ಪ್ರಕಟಿಸಿದ ವರದಿ ತಿಳಿಸಿದೆ.

ಜರ್ಮನಿ ಹಾಗೂ ದಕ್ಷಿಣ ಕೊರಿಯ ದ್ವಿತೀಯ ಸ್ಥಾನದಲ್ಲಿದ್ದು, ಈ ಎರಡೂ ದೇಶಗಳ ಪಾರ್ಸ್‌ಪೋರ್ಟ್ ಹೊಂದಿರುವವರು 190 ದೇಶಗಳಿಗೆ ವೀಸಾ ರಹಿತವಾಗಿ ಸಂಚರಿಸಹುದಾಗಿದೆ. ಕಳೆದ ಎಪ್ರಿಲ್‌ನಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಈ ಎರಡೂ ದೇಶಗಳು ಪ್ರಭಾವಶಾಲಿ ಪಾಸ್‌ಪೋರ್ಟ್‌ಗಳ ರ್ಯಾಂಕಿಂಗ್‌ನಲ್ಲಿ ತೃತೀಯ ಸ್ಥಾನದಲ್ಲಿದ್ದವು.

ಫಿನ್‌ಲ್ಯಾಂಡ್, ಲಕ್ಸೆಂಬರ್ಗ್ ಹಾಗೂ ಸ್ಪೇನ್ ದೇಶಗಳು ತೃತೀಯ ಸ್ಥಾನದಲ್ಲಿದ್ದು, ಆ ದೇಶಗಳ ಪಾಸ್‌ಪೋಟ್‌ಗಳೊಂದಿಗೆ ವೀಸಾರಹಿತವಾಗಿ 189 ದೇಶಗಳಿಗೆ ಪ್ರಯಾಣಿಸಬಹುದಾಗಿದೆ. 188 ದೇಶಗಳಿಗೆ ಪ್ರವೇಶಿಸಬಹುದಾದ ಪಾಸ್‌ಪೋರ್ಟ್ ನೀಡುವ ಆಫ್ರಿಕ ಹಾಗೂ ಡೆನ್ಮಾರ್ಕ್ ನಾಲ್ಕನೆ ಸ್ಥಾನದಲ್ಲಿದೆ.

ಹೆನ್ಲೆ ಆ್ಯಂಡ್ ಪಾರ್ಟ್‌ನರ್ಸ್‌ ಸಂಸ್ಥೆಯು ಪ್ರತಿವರ್ಷವೂ ಈ ಸೂಚ್ಯಂಕವನ್ನು ಅಪ್‌ಡೇಟ್ ಮಾಡುತ್ತಿದ್ದು, ಯಾವ ದೇಶಗಳ ಪಾಸ್‌ಪೋರ್ಟ್ ಮೂಲಕ ವೀಸಾರಹಿತವಾಗಿ ಎಷ್ಟು ರಾಷ್ಟ್ರಗಳಿಗೆ ಪ್ರಯಾಣಿಸಬಹುದಾಗಿಯೇ ಆದರ ಆಧಾರದಲ್ಲಿ ಅವುಗಳಿಗೆ ರ್ಯಾಂಕಿಂಗ್ ನೀಡಲಾಗುತ್ತಿದೆ.

ಕಳೆದ ಏಪ್ರಿಲ್‌ನಲ್ಲಿ ಜಪಾನ್ ದೇಶವು ಜಗತ್ತಿನಲ್ಲೇ ಅತ್ಯಂತ ಪ್ರಭಾವಶಾಲಿ ಪಾಸ್‌ಪೋರ್ಟ್ ಎನಿಸಿಕೊಂಡಿತ್ತು. ಆಗ ಜಪಾನಿ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ರಹಿತವಾಗಿ 193 ದೇಶಗಳಿಗೆ ಪ್ರಯಾಣಿಸಲು ಸಾಧ್ಯವಿದ್ದುದರಿಂದ ಅದು ನಂ. 1 ಸ್ಥಾನದಲ್ಲಿತ್ತು ಮತ್ತು 192 ದೇಶಗಳಿಗೆ ಪ್ರಯಾಣಿಸಲು ಸಾಧ್ಯವಿದ್ದ ಸಿಂಗಾಪುರ ದ್ವಿತೀಯ ಸ್ಥಾನದಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News