×
Ad

ಬೈಂದೂರು ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಕೊಲೆ ಪ್ರಕರಣ: ಆರೋಪಿಗಳು ಖುಲಾಸೆ

Update: 2022-01-13 22:18 IST

ಉಡುಪಿ, ಜ.13: ಬೈಂದೂರಿನ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಉಡುಪಿಯ ವಿಶೇಷ ಪೋಸ್ಕೊ ಕಾಯ್ದೆ ಅಧಿವಿಚಾರಣಾ ನ್ಯಾಯಾಲಯ ಹಾಗೂ ಅಡಿಷನಲ್ ಡಿಸ್ಟ್ರಿಕ್ಟ್ ಮತ್ತು ಸೆಷನ್ಸ್ ನ್ಯಾಯಾಲಯ ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ.

2015ರ ಜೂ.17ರಂದು ಸಂಜೆ ಬೈಂದೂರು ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ನಿರ್ಜನ ಪ್ರದೇಶದ ಕಾಲುದಾರಿಯ ಹಾಡಿಯಲ್ಲಿ ಸುನೀಲ್ ಆಲಿಯಾಸ್ ಕಪ್ಪೆ(19) ಎಂಬಾತ ಹಿಂದಿನಿಂದ ಬಂದು ಆಕೆಯ ಚೂಡಿದಾರದ ವೇಲು ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದನು. ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿ ದ್ದಾನೆ. ಆನಂತರ ಆಕೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಈ ಘಟನೆ ಇಡೀ ಜಿಲ್ಲೆಯಲ್ಲಿ ಆತಂಕ ಮೂಡಿಸಿತ್ತು.

ಘಟನೆಯ ಎರಡೇ ದಿನಗಳಲ್ಲಿ ಸುನೀಲ್‌ನನ್ನು ಯೋಜನಾನಗರದಲ್ಲಿ ಪೊಲೀಸರು ಬಂಧಿಸಿದ್ದರು. ಜೊತೆಗೆ ಈತನಿನಗೆ ಸಹಕರಿಸಿದ ಅಕ್ಷಯ ಆಲಿ ಯಾಸ್ ಪಕ್ಕನನ್ನೂ ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಸುಮಾರು 26 ಸಾಕ್ಷಿದಾರರನ್ನು ಅಧಿ ವಿಚಾರಣೆ ನಡೆಸಿತ್ತು.

ಆರೋಪಿ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನಲೆ ಯಲ್ಲಿ ಆರೋಪಿಗಳಾದ ಸುನೀಲ್ ಮತ್ತು ಅಕ್ಷಯನನ್ನು ವಿಶೇಷ ಪೋಕ್ಸೊ ನ್ಯಾಯಾಲಯ ದೋಷಮುಕ್ತಗೊಳಿಸಿ ಆದೇಶ ನೀಡಿತು. ಆರೋಪಿಗಳ ಪರವಾಗಿ ಉಡುಪಿಯ ವಕೀಲರಾದ ಸುಬ್ರಹ್ಮಣ್ಯ ಎಸ್. ಮತ್ತು ಪೂರ್ಣಿಮಾ ಎಸ್ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News