ಅಮೇರಿಕಾದ ಫೆಲೋಶಿಪ್‍ಗೆ ಉಪ್ಪಿನಂಗಡಿಯ ವಿದ್ಯಾರ್ಥಿನಿ ಆಯ್ಕೆ

Update: 2022-01-13 17:26 GMT

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2020-2021 ಸಾಲಿನ ತೃತೀಯ ಬಿ.ಎಸ್.ಡಬ್ಲ್ಯೂ. ಪದವಿ ವಿದ್ಯಾರ್ಥಿನಿ ಸ್ಮಿತಾ ಅವರು ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾದ ಸಂಸ್ಥೆಯೊಂದು ಕೊಡುವ ಫೆಲೋಶಿಪ್‍ಗೆ  "ಎಸ್‍ಎಎಸ್ ಸ್ಕಾಲರ್" ಆಗಿ ಆಯ್ಕೆಯಾಗಿದ್ದಾರೆ.

ಸ್ಮಿತಾ ಅವರ ಶೈಕ್ಷಣಿಕ ಪ್ರಗತಿ, ಭಾಷಣ ಹಾಗೂ ಬರವಣಿಗೆ ಸೇರಿದಂತೆ ಮತ್ತಿತರ ಅವರ ಪ್ರತಿಭೆಯನ್ನು ಗುರುತಿಸಿ ಅವರನ್ನು ಈ ಫೆಲೋಶಿಪ್‍ಗೆ ಆಯ್ಕೆ ಮಾಡಲಾಗಿದ್ದು, ಕಳೆದ ವರ್ಷದ ಪದವಿ ಅಧ್ಯಯನದ ಸಂದರ್ಭದಲ್ಲೂ ಈ ಫೆಲೋಶಿಪ್‍ಗೆ ಇವರು ಆಯ್ಕೆಯಾಗಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಲೇಜಿನ ಗೌರವ ಮತ್ತು ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ನಂದೀಶ್ ವೈ.ಡಿ. ಇವರು ಈ ಫೆಲೋಶಿಪ್‍ಗೆ ಆಯ್ಕೆಯಾಗಲು ಮಾರ್ಗದರ್ಶನ ನೀಡಿದ್ದು, ಇವರು ಉನ್ನತ ಶಿಕ್ಷಣಕ್ಕಾಗಿ ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂಎಸ್‍ಡಬ್ಲ್ಯು ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶಾತಿಯನ್ನು ಪಡೆದುಕೊಂಡಿದ್ದಾರೆ. ಬಜತ್ತೂರು ಗ್ರಾಮದ ಬೆದ್ರೋಡಿಯವರಾದ ಸ್ಮಿತಾ ಅವರು ಭರತ್ ಹಾಗೂ ವಿಮಲಾ ದಂಪತಿಯ ಪುತ್ರಿ ಎಂದು ಪ್ರೊ. ಸುಬ್ಬಪ್ಪ ಕೈಕಂಬ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News