ಅಂತರ್ ರಾಷ್ಟ್ರೀಯ ಕವನ ರಚನಾ ಸ್ಪರ್ಧೆ: ಮಂಗಳೂರಿನ ಮುಹಮ್ಮದ್ ಮನ್ಸೂರ್‌ಗೆ ದ್ವಿತೀಯ ಸ್ಥಾನ
Update: 2022-01-13 23:57 IST
ಚಿತ್ರದುರ್ಗ, ಜ.13: ಕೇಂದ್ರ ಸಾಹಿತ್ಯ ವೇದಿಕೆ ಬೆಂಗಳೂರು ಇದರ ಚಿತದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಘಟಕ ಏರ್ಪಡಿಸಿದ್ದ ಅಂತರ್ಜಾಲ ಆಧಾರಿತ ಅಂತರ್‌ರಾಷ್ಟ್ರೀಯ ಮಟ್ಟದ ಸಾಹಿತ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಮುಹಮ್ಮದ್ ಮನ್ಸೂರ್ ಮುಲ್ಕಿ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಮೂಲತಃ ಮಂಗಳೂರು ತಾಲೂಕಿನ ಮುಲ್ಕಿ ಕೆ.ಎಸ್.ರಾವ್ ನಗರದ ನಿವಾಸಿಯಾಗಿರುವ ಇವರು, ಪ್ರಸ್ತುತ ಮಂಗಳೂರು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಹಮ್ಮದ್ ಮನ್ಸೂರ್ ಅವರು, ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ಅವರ ಕುರಿತು ಕವನ ರಚನೆ ಮಾಡಿ ದ್ವಿತೀಯ ಬಹುಮಾನ ಪಡೆದ್ದಾರೆ.