ಮಂಗಳೂರು: ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಷಯವಾರು ತರಬೇತಿ ಕಾರ್ಯಾಗಾರ ಉದ್ಘಾಟನೆ

Update: 2022-01-14 16:05 GMT

ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಆಯ್ದ 18 ಸರಕಾರಿ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಪ್ರತೀ ಶಾಲೆಯ 15 ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ 7 ಕೇಂದ್ರಗಳಲ್ಲಿ ವಿಷಯವಾರು ತರಬೇತಿ ಕಾರ್ಯಾಗಾರವು ನಡೆಯಲಿದೆ.

ಈ ಬಾರಿ ಎಸೆಸೆಲ್ಸಿ  ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮಪಡಿಸುವ ಸಲುವಾಗಿ ಗಣಿತ, ವಿಜ್ಞಾನ, ಇಂಗ್ಲೀಷ್ ಮತ್ತು ಸಮಾಜ ವಿಜ್ಞಾನ ವಿಷಯಗಳ ಜೊತೆಗೆ ಪ್ರೇರಣಾ ತರಗತಿಯನ್ನು ನುರಿತ ಶಿಕ್ಷಕರಿಂದ ನಡೆಸಲಾಗುವುದು. ಇದರ ಉದ್ಘಾಟನಾ ಕಾರ್ಯಕ್ರಮವು ಜನವರಿ 12 ರಂದು ಸರಕಾರಿ ಪ್ರೌಢ ಶಾಲೆ ಕಾವಳಪಡೂರು ವಗ್ಗದಲ್ಲಿ ನಡೆಯಿತು.

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಎಂ.ಪಿ ಜ್ಞಾನೇಶ್ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಶಾಲಾಭಿವೃಧ್ಧಿ ಸಮೀತಿಯ ಅಧ್ಯಕ್ಷರಾದ ಪಿ. ಜಿನರಾಜ ಆರಿಗ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಶಿಕ್ಷಣ ಸಂಯೋಜಕರಾದ ಶ್ರೀಮತಿ ಸುಜಾತ, ಬುರೂಜ್ ಆಂಗ್ಲ ಮಾಧ್ಯಮ ಶಾಲೆಯ ರಹ್ಮತುಲ್ಲಾ ಸಾಹೇಬ್, ಸರಕಾರಿ ಪ್ರೌಢ ಶಾಲೆ ಕಾವಳಪಡೂರು ವಗ್ಗ ಇದರ ಮುಖ್ಯೋಪಾಧ್ಯಯರಾದ ಶೇಖ್ ಆದಂ ಸಾಹೇಬ್ ಮುಖ್ಯ ಅತಿಥಿಗಳಾಗಿದ್ದರು. ಪ್ರೇರಣಾ ತರಬೇತುದರರಾಗಿ ರಫೀಕ್ ಮಾಸ್ಟರ್ ಮಂಗಳೂರು, ಗಣಿತ ತರಬೇತುದಾರರಾಗಿ ಪಂಚದುರ್ಗ ಪ್ರೌಢ ಶಾಲೆ ಕಕ್ಕೆಪದವು ಇಲ್ಲಿನ ಗಣಿತ ಶಿಕ್ಷಕರಾದ ಜಯರಾಮ್ ಕಕ್ಕೆಪದವು, ವಿಜ್ಞಾನ ತರಬೇತುದಾರಾಗಿ ಸರಕಾರಿ ಪ್ರೌಢ ಶಾಲೆ ವಾಮದಪದವು ಇದರ ವಿಜ್ಞಾನ ಶಿಕ್ಷಕಿಯಾದ ವಿಧ್ಯಾ, ಸಮಾಜ ತರಬೇತುದಾರರಾಗಿ ಸರಕಾರಿ ಪ್ರೌಢ ಶಾಲೆ ಕಾವಳಕಟ್ಟೆಯ ಸಮಾಜ ವಿಜ್ಞಾನ ಶಿಕ್ಷಕಿಯಾದ ಪುಷ್ಪಲತಾ ಸಹಕರಿಸದರು. 

ಟ್ಯಾಲೆಂಟ್ ಅಧ್ಯಕ್ಷ ರಿಯಾಝ್ ಅಹ್ಮದ್ ಕಣ್ಣೂರು ಸ್ವಾಗತಿಸಿದರು. ಸದಸ್ಯರಾದ ನಕಾಶ್ ಬಾಂಬಿಲ ಧನ್ಯವಾದಗೈದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News