×
Ad

ಸುಳ್ಯ: ಫ್ರುಟ್ಸ್ ಆಪ್ ಮೂಲಕ ಬೆಳೆ ಮತ್ತು ಕೃಷಿ ಸಾಲ ನೋಂದಣಿ ಕುರಿತು ಕಾರ್ಯಾಗಾರ

Update: 2022-01-15 18:15 IST

ಸುಳ್ಯ: ಸುಳ್ಯ ಸಹಕಾರ ಯೂನಿಯನ್ ನಿ, ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿ, ಕೃಷಿ ಇಲಾಖೆ ಸುಳ್ಯ, ಉಪನೋಂದಣಾಧಿಕಾರಿಗಳ ಕಛೇರಿ ಸುಳ್ಯ, ಭೂಮಿ ಶಾಖೆ- ತಾಲೂಕು ಕಛೇರಿ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಫ್ರುಟ್ಸ್ ಮೂಲಕ ಬೆಳೆ ಸಾಲ ಮತ್ತು ಕೃಷಿ ಸಾಲಗಳ ನೋಂದಣಿ ಮಾಡುವ ಬಗ್ಗೆ ತಾಲೂಕಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮಾಹಿತಿ ಕಾರ್ಯಗಾರ ಶುಕ್ರವಾರ ಸುಳ್ಯ ಸಿ.ಎ.ಬ್ಯಾಂಕ್ ಸಭಾಭವನದಲ್ಲಿ ನಡೆಯಿತು.

ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ ಕಾರ್ಯಕ್ರಮ ಉದ್ಘಾಟಿಸಿದರು. ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಹಾಯಕ ಕೃಷಿ ನಿರ್ದೇಶಕವೀರ ಶೆಟ್ಟಿ ಕೃಷಿಕರ ಎಫ್. ಐ. ಡಿ ಮಾಡಿಸುವ ಬಗ್ಗೆ ಮಾಹಿತಿ ನೀಡಿದರು. ಸುಳ್ಯಸಬ್ ರಿಜಿಸ್ಟ್ರಾರ್ ಕಛೇರಿಯ ಸಿಬಂದಿ ಪ್ರಭಾಕರ್ ತಂತ್ರಂಶದಲ್ಲಿ ಸಮಸ್ಯೆ ಬಂದ ಕಡತಗಳಿಗೆ ಫಾರಂ ನಂ 3 ಮ್ಯಾನುವಲ್ ನೀಡುವ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಕಛೇರಿ ಭೂಮಿ ಕೇಂದ್ರದ ಅಧಿಕಾರಿ ಕುಮಾರ ಸ್ವಾಮಿ ಪಹಣಿ ದಾಖಲು ಮಾಡಿಸುವ ಬಗ್ಗೆ ಮಾಹಿತಿ ನೀಡಿದರು. 

ಕೃಷಿ ಇಲಾಖೆಯ ತಾಂತ್ರಿಕ ಕೃಷಿ ಅಧಿಕಾರಿ ಮೋಹನ್ ನಂಗಾರು, ಸುಳ್ಯ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ವಿಶ್ವನಾಥ್, ಅರಂತೋಡು ಸೊಸೈಟಿ ಅಧ್ಯಕ್ಷ  ಸಂತೋಷ್ ಕುತ್ತಮೊಟ್ಟೆ, ಸುಳ್ಯ ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ ಉಪಸ್ಥಿತರಿದ್ದರು.

ಸುಳ್ಯ ಸಿ.ಎ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಸುದರ್ಶನ್ ಎಸ್.ಪಿ., ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾದಿಕಾರಿ ಕೆ.ಟಿ. ವಿಶ್ವನಾಥ್ ಆನ್ ಲೈನ್ ಮೂಲಕ ಫ್ರೂಟ್ಸ್ ತಂತ್ರಾಂಶದಲ್ಲಿ ಸಾಲವನ್ನು ನಮೂದಿಸುವ ಮೂಲಕ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಕನಕಮಜಲು ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾದಿಕಾರಿ ಲೋಹಿತ್ ಕುಮಾರ್ ಸ್ವಾಗತಿಸಿ, ಮಕರ್ಂಜ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್ ಕುಮಾರ್ ವಂದಿಸಿದರು. ಅರಂತೋಡು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News