ಮಲಾರ್ ಅರಸ್ತಾನ: ಮಸ್ಜಿದ್ ಮಿನಾರ ನಿರ್ಮಾಣಕ್ಕೆ ಶಿಲಾನ್ಯಾಸ

Update: 2022-01-15 17:46 GMT

ಮಂಗಳೂರು, ಜ.15: ಮಲಾರ್ ಎಸ್‌ಎಂಎಫ್, ಎಸ್‌ವೈಎಸ್, ಎಸ್ಕೆಎಸೆಸ್ಸೆಫ್ ಇದರ ಸಂಯುಕ್ತ ಆಶ್ರಯದಲ್ಲಿ ಮಲಾರ್ ಅರಸ್ತಾನದ ಅಲ್ ಮುಬಾರಕ್ ಜುಮಾ ಮಸ್ಜಿದ್‌ನ ಮಿನಾರ ನಿರ್ಮಾಣಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಅಲ್ಮುಬಾರಕ್ ಜುಮಾ ಮಸ್ಜಿದ್‌ನ ಅಧ್ಯಕ್ಷ ಹಾಮದ್ ಅಲ್ತಾಫ್‌ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖತೀಬ್ ನಾಸೀರ್ ಅಝ್ಹರಿ ಕುಂಜತ್ತೂರು ಶಿಲಾನ್ಯಾಸಗೈದರು. ಈ ಸಂದರ್ಭ ಅಲ್ಮುಬಾರಕ್ ಜುಮಾ ಮಸ್ಜಿದ್‌ನ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಮೋನು, ಹಂಝ ಮಲಾರ್, ಎಸ್‌ಎಂಎಫ್ ಮಲಾರ್ ಇದರ ಅಧ್ಯಕ್ಷ ಮುಹಮ್ಮದ್ ಬಿ, ಎಸ್ಕೆಎಸೆಸ್ಸೆಫ್ ಅರಸ್ತಾನ ಇದರ ಅಧ್ಯಕ್ಷ ಇರ್ಫಾನ್ ಡಿ., ಅಶ್ರಫ್ ಫೈಝಿ ಕೆ.ಎಂ, ಕರೀಮ್ ಮುಸ್ಲಿಯಾರ್, ಸಮದ್ ಕೆ.ಎಂ , ಇಮ್ತಿಯಾಝ್ ಬಿ, ಅಶ್ರಫ್ ಫೈಝಿ ಎಂ.ಐ, ಝುಬೈರ್ ಮಲಾರ್, ಮಸೀದಿಯ ಉಪಾಧ್ಯಕ್ಷ ನಾಸೀರ್ ಟಿ, ಪ್ರಧಾನ ಕಾರ್ಯದರ್ಶಿ ಶಮೀರ್ ಟಿಪ್ಪುನಗರ, ಕಾರ್ಯದರ್ಶಿ ನೌಶಾದ್ ಮಲಾರ್, ಕೋಶಾಧಿಕಾರಿ ಮಜೀದ್ ಎಂ.ಕೆ., ಸದಸ್ಯರಾದ ರಝಾಕ್, ಬಶೀರ್ ಅಕ್ಷರನಗರ, ಝಕರಿಯಾ ಮುಬಾರಕ್ ನಗರ, ಆಸೀಫ್ ಅಕ್ಷರ ನಗರ , ಸಲಾಂ ನಡುಗುಡ್ಡೆ, ಮಜೀದ್ ರಹ್ಮತ್‌ನಗರ, ಎಂ.ಕೆ. ಸಮದ್, ಕಮರ್ ಎಂ.ಕೆ, ರಿಝ್ವೆನ್ ಅರಸ್ತಾನ, ಪ್ರಮುಖರಾದ ಅಝೀಝ್ ಮೇಸ್ತ್ರಿ, ಯಹ್ಯಾ ಬೆಂಗರೆ, ನೌಶಾದ್ ಅರಸ್ತಾನ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News