ಸರಳ ಪರ್ಯಾಯ ಮಹೋತ್ಸವ: ರಾತ್ರಿ 9.30ರೊಳಗೆ ಅಂಗಡಿಮುಂಗಟ್ಟು ಬಂದ್‌ಗೆ ಉಡುಪಿ ನಗರಸಭೆ ಕಟ್ಟುನಿಟ್ಟಿನ ಆದೇಶ

Update: 2022-01-17 10:55 GMT

ಉಡುಪಿ : ಕೊರೋನ ಭೀತಿಯ ಮಧ್ಯೆ ಸರಳವಾಗಿ ನಡೆಸುತ್ತಿರುವ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನಗರದಲ್ಲಿನ ಅಂಗಡಿಮುಂಗಟ್ಟು ಬೀದಿಬದಿ ವ್ಯಾಪಾರ, ಸಂತೆಗಳನ್ನು ರಾತ್ರಿ 9.30ರೊಳಗೆ ಬಂದ್ ಮಾಡುವಂತೆ ನಗರಸಭೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಈ ಸಂಬಂಧ ನಗರಸಭೆಯವರು ವಾಹನಗಳ ಮೂಲಕ ಸಂಚರಿಸಿ ಧ್ವನಿ ವರ್ಧಕದಲ್ಲಿ ಜನಜಾಗೃತಿ ಮೂಡಿಸಿದರು. ಇದಕ್ಕೆ ನಗರ ಪೊಲೀಸರು ಕೂಡ ಸಹಕಾರ ನೀಡಿದರು. ಕರ್ಫ್ಯೂ ಹಿನ್ನೆಲೆಯಲ್ಲಿ ಜನ ಸಂದಣಿ ನಿಯಂತ್ರಿಸುವುದಕ್ಕಾಗಿ ರಾತ್ರಿ 9.30ರೊಳಗೆ ಎಲ್ಲ ಅಂಗಡಿಮುಗ್ಗಟ್ಟು, ಬೀದಿಬದಿ ವ್ಯಾಪಾರಗಳನ್ನು ಕಡ್ಡಾಯವಾಗಿ ಬಂದ್ ಮಾಡಿ ಸರಕಾರದ ಆದೇಶವನ್ನು ಪಾಲನೆ ಮಾಡಬೇಕು ಎಂದು ಧ್ವನಿವರ್ಧಕದಲ್ಲಿ ಸೂಚಿಸಲಾಯಿತು.

‘ಮೂರನೆ ಅಲೆ ವ್ಯಾಪಾಕವಾಗಿ ಹರಡುತ್ತಿರುವುದರಿಂದ ಪರ್ಯಾಯವನ್ನು ಸರಳ ಹಾಗೂ ಸಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ. ಆದುದರಿಂದ ಪರ್ಯಾಯ ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ಪಾಲ್ಗೊಳ್ಳಲು ಮತ್ತು ವೀಕ್ಷಿಸಲು ಅವಕಾಶ ಇರುವುದಿಲ್ಲ. ಸಾರ್ವಜನಿಕರು ಮನೆಯಲ್ಲೇ ಕುಳಿತು ಟಿವಿ ಮೂಲಕ ಪರ್ಯಾಯವನ್ನು ವೀಕ್ಷಿಸಬೇಕು. ಶ್ರೀಕೃಷ್ಣ ಮಠದ ಸುತ್ತಮುತ್ತ ಅಂಗಡಿಮುಗ್ಗಟ್ಟುಗಳನ್ನು ರಾತ್ರಿ 9.30ರ ಒಳಗೆ ಮುಚ್ಚಲು ಮತ್ತು ಯಾವುದೇ ಸ್ಟಾಲ್, ತಾತ್ಕಾಲಿಕ ಅಂಗಡಿಗಳನ್ನು ರಸ್ತೆ ಬದಿಗಳಲ್ಲಿ ನಿಲ್ಲಿಸಬಾರದು’ ಎಂದು ನಗರಸಭೆ ಪೌರಾಯುಕ್ತ ಡಾ.ಉದಯ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News