ಮಂಗಳೂರು ಸೌಹಾರ್ದ ಸಹಕಾರಿ ಸಂಘದಿಂದ ವೈದ್ಯಕೀಯ ಶಿಬಿರ

Update: 2022-01-17 17:23 GMT

ಮಂಗಳೂರು, ಜ.17: ಸೌಹಾರ್ದ ಸಹಕಾರಿ ಸಂಘ (ನಿ) ಮತ್ತು ಮಂಗಳೂರು ಹಾರ್ಟ್ ಸ್ಕಾನ್ ಫೌಂಡೇಶನ್‌ನ ಸಹಯೋಗದಲ್ಲಿ ರವಿವಾರ ಜೆಪ್ಪು ಶಾಂತಿನಗರದ ಮಂಗಳೂರು ಸ್ಟೋರ್ ಆವರಣದಲ್ಲಿ ಉಚಿತ ಹೃದಯ ತಪಾಸಣೆ ಮತ್ತು ಮಾಹಿತಿ ಶಿಬಿರ ನಡೆಯಿತು.

ಸಹಕಾರಿ ಸಂಘದ ಅಧ್ಯಕ್ಷ ಕೆ,ಭಾಸ್ಕರ್ ರಾವ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಕ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಜೆ.ಕೊರಗಪ್ಪ, ಡಾ. ಮುಕುಂದ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು.

ಕೋವಿಡ್ ಸಂದರ್ಭ ಉತ್ತಮ ಸೇವೆ ನೀಡಿರುವ ಜಪ್ಪು ಆರೋಗ್ಯ ಕೇಂದ್ರದ ಡಾ. ವಿದ್ಯಾ ಹಾಗೂ ಸಿಎ ಪರೀಕ್ಷೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದ ರುಥ್ ಕ್ಲೇರ್ ಡೀಸಿಲ್ವಾ ಅವರನ್ನು ಅಭಿನಂದಿಸಲಾಯಿತು.

ಕಾರ್ಯದರ್ಶಿ ಚಂದ್ರಿಕಾ ಡಿ. ರಾವ್, ವಸಂತ ಶೆಟ್ಟಿ, ಉಪಾಧ್ಯಕ್ಷ ಎ.ಕೃಷ್ಣ ಭಟ್, ನಿರ್ದೇಶಕರಾದ ವಿಜಿತಾ ರಾವ್ , ಲತಾ ಎನ್. ಆಳ್ವ, ಸುಪ್ರೀತ್ ಜೆ.ಕೆ, ಸುಂದರ್ ಸಾಲ್ಯಾನ್ , ಸದಾಶಿವ ಅಮೀನ್ ರತನ್ ಕುಮಾರ್, ರಾಮ್ ಮೋಹನ್, ಸದಸ್ಯರಾದ ಜಯಪ್ರಕಾಶ್, ಶಿವಾನಂದ ಪ್ರಭು, ಬಾಲಕೃಷ್ಣ , ಶುಭ ಪ್ರಶಾಂತ್, ಆನಂದ ಸೋನ್ಸ್, ಸತೀಶ್ ಪೆಂಗಲ್, ಅಲ್ಸ್ಟನ್, ನರಸಿಂಹ, ಭಾಸ್ಕರ್ ಕೊಡಿಕಲ್, ಉಮೇಶ್ ಬಾಬುಗುಡ್ಡೆ, ಸುಧೀರ್ ಕೋಟ್ಯಾನ್, ಜೆಮ್ಸ್ ಪ್ರವೀಣ್, ಪ್ರದೀಪ್ ಮಾರ್ನಮಿಕಟ್ಟೆ, ವಾರಿಜಾ ಕೊರಗಪ್ಪ, ಸುಧಾಕರ ಜೋಗಿ, ರಮಾನಂದ ಬೋಳಾರ ಮತ್ತಿತರರು ಉಪಸ್ಥಿತರಿದ್ದರು.

ಸಹಕಾರಿ ಸಂಘದ ನಿರ್ದೇಶಕ ಸದಾಶಿವ ಅಮಿನ್ ವಂದಿಸಿದರು. ವಿನುತಾ ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News